ನೀತಿ ಆಯೋಗದ ಮಾಜಿ ಅಧ್ಯಕ್ಷೆ ಲಂಡನ್ ನಲ್ಲಿ ಅಪಘಾತಕ್ಕೆ ಬಲಿ

In ಅಪರಾಧ, ವಿದೇಶ
March 25, 2024

ಲಂಡನ್: ನೀತಿ ಆಯೋಗದ ಮಾಜಿ ಉದ್ಯೋಗ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಲಂಡನ್ ನಲ್ಲಿ ನಡೆದಿದೆ.

ಲಂಡನ್‌ ನಲ್ಲಿ ಪಿಎಚ್‌.ಡಿ ಓದುತ್ತಿದ್ದರು. ಚೀಸ್ತಾ ಕೊಚ್ಚರ್ (33) ಸಾವನ್ನಪ್ಪಿರುವ ವಿದ್ಯಾರ್ಥಿನಿ. ಕಳೆದ ವಾರ ಲಂಡನ್‌ನ ತನ್ನ ಮನೆ ಕಡೆಗೆ ಸೈಕ್ಲಿಂಗ್‌ ಮಾಡುತ್ತಿದ್ದಾಗ ಟ್ರಕ್‌ಗೆ ಸಿಲುಕಿ ಸಾವನ್ನಪ್ಪಿದ್ದಾರೆ. ನೀತಿ ಆಯೋಗದೊಂದಿಗೆ ಅವರು ಕೆಲಸ ಮಾಡಿದ್ದ ಚೀಸ್ತಾ ಕೊಚ್ಚರ್, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಪಿಎಚ್‌.ಡಿ ವ್ಯಾಸಂಗ ಮಾಡುತ್ತಿದ್ದರು. ಈ ಕುರಿತು ನೀತಿ ಆಯೋಗದ ಮಾಜಿ ಸಿಇಒ ಅಮಿತಾಭ್ ಕಾಂತ್, ಚೀಸ್ತಾ ಅವರ ಸಾವಿನ ಸುದ್ದಿ ಹಂಚಿಕೊಂಡಿದ್ದಾರೆ.

ಚೀಸ್ತಾ ಕೊಚಾರ್ ನನ್ನೊಂದಿಗೆ ನೀತಿ ಆಯೋಗದಲ್ಲಿ ಲೈಫ್ ಕಾರ್ಯಕ್ರಮದಲ್ಲಿ ಕೆಲಸ ಮಾಡಿದ್ದರು. ಲಂಡನ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ನಲ್ಲಿ Ph.D ವ್ಯಾಸಾಂಗಕ್ಕೆಂದು ತೆರಳಿದ್ದರು. ಆದರೆ, ಲಂಡನ್‌ನಲ್ಲಿ ಸೈಕ್ಲಿಂಗ್ ಮಾಡುವಾಗ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಧೈರ್ಯಶಾಲಿ ಹೆಣ್ಣು, ಸದಾ ಜೀವನೋತ್ಸಾಹದಿಂದ ಇರುತ್ತಿದ್ದರು. ತುಂಬ ಬೇಗ ಇಹಲೋಕ ತ್ಯಜಿಸಿಬಿಟ್ಟರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅಮಿತಾಭ್ ‌ಪೋಸ್ಟ್ ಹಾಕಿಕೊಂಡಿದ್ದಾರೆ.

ಈ ಸುದ್ದಿ ಹಂಚಿಕೊಳ್ಳಿ