ಭಾರತದ ಹಿಡಿತದಲ್ಲಿ ಮೂರನೇ ಟೆಸ್ಟ್!

In ಕ್ರೀಡೆ
November 02, 2024

ಭಾರತ ಹಾಗೂ ನ್ಯೂಜಿಲೆಂಡ್ ಮಧ್ಯೆ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯ ರೋಚಕ ಹಂತಕ್ಕೆ ಬಂದು ನಿಂತಿದ್ದು, ಭಾರತದ ಹಿಡಿತದಲ್ಲಿದೆ.

ನ್ಯೂಜಿಲೆಂಡ್ ತಂಡ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 143 ರನ್‌ ಗಳ ಮುನ್ನಡೆ ಸಾಧಿಸಿದ್ದು, ಇನ್ನೊಂದು ವಿಕೆಟ್ ಉರುಳುವುದು ಬಾಕಿ ಇದೆ.
ಈ ಗುರಿ ಬೆನ್ನಟ್ಟಿ ಭಾರತ ಗೆದ್ದರೆ, ಮೂರನೇ ಟೆಸ್ಟ್ ನ್ನಾದರೂ ಭಾರತ ಗೆದ್ದಂತಾಗುತ್ತದೆ. ಈ ಸರಣಿಯಲ್ಲಿ ಸ್ಪಿನ್ ಬೌಲರ್‌ ಗಳ ಪ್ರಾಭಲ್ಯ ಕಂಡು ಬಂದಿದೆ. ಎರಡೂ ತಂಡಗಳ ಸ್ಪಿನ್ನರ್‌ಗಳು ವಿಕೆಟ್ಗಳ ಬೇಟೆ ಮುಂದುವರೆಸಿದ್ದಾರೆ. ಈ ಮೂಲಕ ಅಪರೂಪದ ದಾಖಲೆ ನಿರ್ಮಾಣವಾಗಿದೆ.

ಉಭಯ ತಂಡಗಳ ಸ್ಪಿನ್ನರ್ಗಳು ಒಟ್ಟು 24 ವಿಕೆಟ್ ಕಬಳಿಸಿದ್ದಾರೆ. ಈ ಸರಣಿಯಲ್ಲಿ ಸ್ಪಿನ್ ಬೌಲರ್‌ಗಳು ಒಟ್ಟು 71 ವಿಕೆಟ್‌ ಗಳನ್ನು ಪಡೆದಿದ್ದಾರೆ. 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸ್ಪಿನ್ನರ್‌ ಗಳು ಇಷ್ಟು ವಿಕೆಟ್‌ ಗಳಿಸಿರುವುದು ಭಾರತದಲ್ಲಿ ಇದೇ ಮೊದಲಾಗಿದೆ.

ಇದಕ್ಕೂ ಮುನ್ನ 1969ರಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 69 ವಿಕೆಟ್‌ ಪಡೆದಿದ್ದರು. 55 ವರ್ಷಗಳ ನಂತರ ಈ ಎರಡೂ ತಂಡಗಳು ಒಟ್ಟಾಗಿ ಈ ದಾಖಲೆಯನ್ನು ಮುರಿದಿವೆ. ಈಗ ಭಾರತದಲ್ಲಿ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸ್ಪಿನ್ನರ್‌ಗಳು 70 ವಿಕೆಟ್‌ಗಳ ಗಡಿ ದಾಟಿದ್ದಾರೆ. ವಾಷಿಂಗ್ಟನ್ ಸುಂದರ್ ಪಾತ್ರ ಇದರಲ್ಲಿ ಹೆಚ್ಚಿದೆ. ಸುಂದರ್ ಎರಡು ಪಂದ್ಯಗಳ 4 ಇನ್ನಿಂಗ್ಸ್‌ ಗಳಲ್ಲಿ 16 ವಿಕೆಟ್‌ ಗಳನ್ನು ಪಡೆದಿದ್ದಾರೆ. ಈ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಕಬಳಿಸಿದವರಲ್ಲಿ ಸುಂದರ್ ನಂಬರ್ 1 ಸ್ಥಾನದಲ್ಲಿದ್ದಾರೆ.
ಎರಡನೇ ಸ್ಥಾನದಲ್ಲಿ ರವೀಂದ್ರ ಜಡೇಜಾ ಹೆಸರಿದ್ದು, ಇದುವರೆಗೆ 15 ವಿಕೆಟ್ ಪಡೆದಿದ್ದಾರೆ. ಮಿಚೆಲ್ ಸ್ಯಾಂಟ್ನರ್ 13 ವಿಕೆಟ್ ಪಡೆದಿದ್ದರೆ, ಆರ್.ಅಶ್ವಿನ್ ಈ ಸರಣಿಯಲ್ಲಿ ಇದುವರೆಗೆ ಕೇವಲ 9 ವಿಕೆಟ್ ಪಡೆದಿದ್ದಾರೆ.

ಈ ಸುದ್ದಿ ಹಂಚಿಕೊಳ್ಳಿ