ಮದುವೆಯಾಗುವುದಾಗಿ ನಂಬಿಸಿ ವಿಶೇಷ ಚೇತನ ಯುವತಿಗೆ ಮೋಸ!

ಬೆಂಗಳೂರು: ವಿಶೇಷ ಚೇತನ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ವಂಚಿಸಿರುವ ಘಟನೆಯೊಂದು ನಡೆದಿದೆ.

ಸುರೇಂದ್ರ ಮೂರ್ತಿ ಎಂಬಾತನೇ ಯುವತಿಯನ್ನು ನಂಬಿಸಿ ವಂಚಿಸಿದ್ದಾನೆ ಎನ್ನಲಾಗಿದೆ. ಸುರೇಂದ್ರ ಮೂರ್ತಿ ಹಾಗೂ ವಿಶೇಷ ಚೇತನ ಯುವತಿಯ ಮಧ್ಯೆ ಪರಿಚಯವಾಗಿ ಆ ಪರಿಚಯ ಪ್ರೀತಿಯಾಗಿ ತಿರುಗಿತ್ತು. ನಂತರ ಸುರೇಂದ್ರ ಮೂರ್ತಿ ಬ್ಯುಸಿನೆಸ್ ಮಾಡಬೇಕಿದೆ. ಅದಕ್ಕೆ ಹಣ ಬೇಕೆಂದು ಯುವತಿ ಹತ್ತಿರ ಕೇಳಿದ್ದಾನೆ. ತನ್ನ ಪ್ರಿಯತಮನಿಗಾಗಿ ಯುವತಿ ಸಾಲ ಮಾಡಿ, ತನ್ನ ಹತ್ತಿರವಿದ್ದ ಚಿನ್ನ ಅಡವಿಟ್ಟು ಹಣ ನೀಡಿದ್ದಾರೆ. ಆದರೆ, ಹಣ ಪಡೆದ ನಂತರ ಮದುವೆಯಾಗದೆ ವಂಚಿಸಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ.

ಸದ್ಯ ಈ ಕುರಿತು ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಈ ಸುದ್ದಿ ಹಂಚಿಕೊಳ್ಳಿ