ಮರದಿಂದ ಕೆಳಗೆ ಬಿದ್ದು ಬಿಎಂಟಿಸಿ ಚಾಲಕ ಸಾವು!

ಬೆಂಗಳೂರು ಗ್ರಾಮಾಂತರ: ಹಲಸಿನ ಹಣ್ಣು ಕೀಳಲು ಹೋಗಿ ಬಸ್ ಚಾಲಕ ಪ್ರಾಣ ಕಳೆದುಕೊಂಡಿರುವ ಘಟನೆ ನಡೆದಿದೆ.

ಜಿಲ್ಲೆಯ ನೆಲಮಂಗಲ ತಾಲೂಕಿನ ಅರಳಸಂದ್ರ ಗ್ರಾಮದಲ್ಲಿಯೇ ಈ ಘಟನೆ ನಡೆದಿದ್ದು, ಹಲಸಿನ ಹಣ್ಣು ಕೀಳುವಾಗ ಆಯತಪ್ಪಿ ಮರದ ಮೇಲಿಂದ ಬಿಎಂಟಿಸಿ ಚಾಲಕ ಬಿದ್ದಿದ್ದಾರೆ. ಈ ಈ ವೇಳೆ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಸಾವನ್ನಪ್ಪಿದ ಚಾಲಕನನ್ನು ಮಂಜುನಾಥ್(43) ಎಂದು ಗುರುತಿಸಲಾಗಿದೆ. ಇವರು ಕಳೆದ 15 ವರ್ಷಗಳಿಂದ ಪೀಣ್ಯದ ಬಿಎಂಟಿಸಿ ಡಿಪೋ 9ರಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಈ ಕುರಿತು ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ಸುದ್ದಿ ಹಂಚಿಕೊಳ್ಳಿ