ಮಳೆಯಿಂದಾಗಿ ಕೆನಡಾ ವಿರುದ್ಧದ ಪಂದ್ಯ ರದ್ದು; ಭಾರತ ಸೂಪರ್ 8ಕ್ಕೆ ಪ್ರವೇಶ

In ಕ್ರೀಡೆ
June 15, 2024

ಟಿ20 ವಿಶ್ವಕಪ್ ನಲ್ಲಿ ಭಾರತ ಹಾಗೂ ಕೆನಡಾ (IND vs CAN) ಮಧ್ಯೆ ಇಂದು ಪಂದ್ಯ ನಡೆಯಬೇಕಿತ್ತು. ಆದರೆ, ವರುಣ ಅಡ್ಡಿ ಪಡಿಸಿದ್ದಾನೆ.

ಇದೊಂದು ಔಪಚಾರಿಕ ಪಂದ್ಯವಾಗಿತ್ತು. ಆದರೆ, ಒಂದೇ ಒಂದು ಎಸೆತ ಕಾಣದೆ ರದ್ದಾಗಿದೆ. ಈ ಪಂದ್ಯದಲ್ಲಿ ಟಾಸ್ ಕೂಡ ನಡೆಯಲು ಸಾಧ್ಯವಾಗದ ಕಾರಣ ಎರಡು ಬಾರಿ ಫೀಲ್ಡ್ ಪರಿಶೀಲಿಸಿದ ಅಂಪೈರ್ ಪಂದ್ಯ ರದ್ದುಗೊಳಿಸಿದರು.

ಭಾರತ ತಂಡ ಈಗಾಗಲೇ ಎ ಗುಂಪಿನಿಂದ ಸೂಪರ್ 8 ಸುತ್ತಿಗೆ ಪ್ರವೇಶಿಸಿದೆ. ಪಂದ್ಯದ ರದ್ದತಿಯಿಂದ ತಂಡದ ಸ್ಥಾನದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಆದರೆ ಕೆನಡಾ ವಿರುದ್ಧ ಭಾರತ ತಂಡದಲ್ಲಿ ಹೊಸಬರಿಗೆ ಅವಕಾಶ ಸಿಗುವ ಸಾಧ್ಯತೆ ಇತ್ತು. ಆದರೆ, ಬೆಂಚ್ ಸಾಮರ್ಥ್ಯ ಪರೀಕ್ಷಿಸಲು ಉತ್ತಮ ಅವಕಾಶ ಇಲ್ಲದಂತಾಯಿತು.

ಭಾರತ ತಂಡ ಮುಂದಿನ ಪಂದ್ಯವನ್ನು ಸೂಪರ್ 8 ಸುತ್ತಿನಲ್ಲಿ ಆಡಲಿದೆ. ಅಲ್ಲಿ ಟೀಂ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಆಫ್ಘಾನಿಸ್ತಾನ ವಿರುದ್ಧ ಆಡಲಿದೆ. ಈ ಪಂದ್ಯ ಜೂನ್ 20 ರಂದು ನಡೆಯಲಿದೆ. ಎರಡನೇ ಪಂದ್ಯವನ್ನು ಗ್ರೂಪ್ ಡಿ ಗುಂಪಿನಲ್ಲಿ ಎರಡನೇ ಸ್ಥಾನ ಪಡೆಯುವ ತಂಡದ ವಿರುದ್ಧ ಆಡಲಿದೆ. ಬಾಂಗ್ಲಾದೇಶ ಅಥವಾ ನೆದರ್ಲೆಂಡ್ಸ್, ಈ ಎರಡರಲ್ಲಿ ಒಂದು ತಂಡವಾಗಿರಲಿದೆ. ಇದಲ್ಲದೇ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧವೂ ಪಂದ್ಯ ಆಡಲಿದೆ. ಈ ಪಂದ್ಯ ಜೂನ್ 24 ರಂದು ನಡೆಯಲಿದೆ.

ಗ್ರೂಪ್ ಹಂತದಲ್ಲಿ ಭಾರತ ತಂಡವು ಸತತ ಮೂರು ಪಂದ್ಯಗಳನ್ನು ಗೆದ್ದಿತ್ತು. ನಾಲ್ಕನೇ ಪಂದ್ಯ ಮಳೆಗೆ ಆಹುತಿಯಾಗಿದೆ.

ಈ ಸುದ್ದಿ ಹಂಚಿಕೊಳ್ಳಿ