ವಿಜಯಪುರ: ಮೊಹರಂ ಮೆರವಣಿಗೆ ಸಂದರ್ಭದಲ್ಲಿ ವಿದ್ಯುತ್ ಅವಘಡ ಸಂಭವಿಸಿ ಓರ್ವ ವ್ಯಕ್ತಿ ಸಾವನ್ನಪ್ಪಿದ ಘಟನೆ ನಗರದ (Vijayapura) ಮೆಹತರ್ ಮಹಲ್ ಹತ್ತಿರ ನಡೆದಿದೆ.
ವಾಹನ ಚಾಲಕ ಮೊಹಮ್ಮದ್ ಇನಾಂದಾರ್(40) ಸಾವನ್ನಪ್ಪಿದ ವ್ಯಕ್ತಿ. ಮೊಹಮ್ಮದ್ ಎದುರಿಗೆ ಬಂದ ಕಾರಿಗೆ ದಾರಿ ಬಿಡುವ ಸಂದರ್ಭದಲ್ಲಿ ಟ್ರಾನ್ಸ್ಫಾರ್ಮರ್ ಗೆ ವಾಹನ ತಗುಲಿದೆ. ಆಗ ವಿದ್ಯುತ್ ತಗುಲಿದ್ದು, ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಮತ್ತೋರ್ವ ಸಾಧಿಕ್ ಎಂಬಾತನಿಗೆ ಗಾಯವಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಗೋಲಗುಂಬಜ್ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.





