108 views 1 sec 0 comments

ವಯನಾಡು ದುರಂತ; ಕರ್ನಾಟಕ ಮೂಲದ ಒಂದೇ ಕುಟುಂಬದ 9 ಜನರ ಮೃತದೇಹ ಪತ್ತೆ

In ದೇಶ
August 04, 2024

ಮಡಿಕೇರಿ: ವಯನಾಡು ಭೂಕುಸಿತ (Wayanad landslides) ದುರಂತದಲ್ಲಿ ನಾಪತ್ತೆಯಾಗಿದ್ದ ಕೊಡಗಿನ (Kodagu) ಮೂಲದ ಒಂದೇ ಕುಟುಂಬದ 9 ಜನರ ಮೃತದೇಹ ಪತ್ತೆಯಾಗಿವೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಕೊಡಗಿನ ನೆಲ್ಯಹುದಿಕೇರಿ ಮೂಲದ ಮಹಿಳೆ ಹಾಗೂ ಆಕೆಯ ಕುಟುಂಬಸ್ಥರ ಮೃತದೇಹಗಳು ಭಾನುವಾರ ಪತ್ತೆಯಾಗಿವೆ. ಕುಶಾಲನಗರ ತಾಲ್ಲೂಕಿನ ನಲ್ವತ್ತೇಕರೆ ನಿವಾಸಿ ಪೊನ್ನಮ್ಮ ಎಂಬವರ ಮಗಳು ದಿವ್ಯಾ (35) ಅವರನ್ನು ಚೂರಲ್ ಮಲೈಗೆ ಮದುವೆ ಮಾಡಿ ಕೊಡಲಾಗಿತ್ತು. ವ್ಯಾಪಕ ಮಳೆಯಿಂದಾಗಿ ಭೂಕುಸಿತದ ನಂತರ ದಿವ್ಯಾ ಸೇರಿದಂತೆ ಕುಟುಂಬದ 9 ಜನ ನಾಪತ್ತೆಯಾಗಿದ್ದರು. ಮಗಳು ಹಾಗೂ ಕುಟುಂಬಸ್ಥರನ್ನು ಹುಡುಕಿಕೊಡುವಂತೆ ಪೊನ್ನಮ್ಮ ಸರ್ಕಾರಕ್ಕೆ ಮನವಿ ಮಾಡಿದ್ದರು.

ಸದ್ಯ ದುರಂದಲ್ಲಿ ನಾಪತ್ತೆಯಾಗಿದ್ದ ಒಂದೇ ಕುಟುಂಬದ 9 ಜನರ ಪೈಕಿ 8 ಜನರ ಮೃತದೇಹ ಪತ್ತೆಯಾಗಿದೆ. ದಿವ್ಯಾ ಹಾಗೂ ಮಗ ಲಕ್ಷಿತ್ ಮೃತದೇಹ ಒಟ್ಟಿಗೆ ಪತ್ತೆಯಾಗಿದೆ. ದಿವ್ಯಾ ವಯನಾಡುವಿನ ಮಿಮ್ಸ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು ಎನ್ನಲಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಈ ಸುದ್ದಿ ಹಂಚಿಕೊಳ್ಳಿ