62 views 1 sec 0 comments

ಕಾಡಿನಿಂದ ನಾಡಿಗೆ ಬಂದು ವಿದ್ಯುತ್ ಸ್ಪರ್ಶಕ್ಕೆ ಬಲಿಯಾದ ಆನೆ

In ಹಾಸನ, ರಾಜ್ಯ
October 17, 2024
ಕಾಡಿನಿಂದ ನಾಡಿಗೆ ಬಂದು ವಿದ್ಯುತ್ ಸ್ಪರ್ಶಕ್ಕೆ ಬಲಿಯಾದ ಆನೆ

ಹಾಸನ: ಆಹಾರ ಅರಸಿ ನಾಡಿಗೆ ಬಂದಿದ್ದ ಕಾಡಾನೆಯೊಂದು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.

ಸಕಲೇಶಪುರ (Sakleshpur) ತಾಲೂಕಿನ ಬನವಾಸೆ ಗ್ರಾಮದ ಬಳಿ ಕಾಡಾನೆಯೊಂದು (Elephant) ಸಾವನ್ನಪ್ಪಿದೆ. ಗ್ರಾಮದ ಬಿಎಸ್ಎನ್ಎಲ್ ಟವರ್ ಹತ್ತಿರ ವಿದ್ಯುತ್ ತಂತಿ ಸ್ಪರ್ಶಿಸಿ ಅಂದಾಜು 25 ವರ್ಷದ ಒಂಟಿಸಲಗ ಸಾವನ್ನಪ್ಪಿದೆ. ಕಾಡಾನೆಯು ಆಹಾರ ಅರಸಿ ಗ್ರಾಮಕ್ಕೆ ಬಂದಿತ್ತು. ಈ ವೇಳೆ ವಿದ್ಯುತ್ ತಂತಿಗೆ ಆನೆಯ ಸೊಂಡಿಲು ತಾಗಿ ಮೃತಪಟ್ಟಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಸುದ್ದಿ ಹಂಚಿಕೊಳ್ಳಿ