ಶತಕದ ಹೊಸ್ತಿಲಲ್ಲಿ ಎಡವಿದ ಶುಭಮನ್ ಗಿಲ್!

In ಕ್ರೀಡೆ
November 02, 2024

ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಮೊದಲ ಇನ್ನಿಂಗ್ಸ್ ನಲ್ಲಿ ಆಲ್ ಔಟ್ ಆಗಿದೆ.

ಈ ವೇಳೆ ಉತ್ತಮ ಪ್ರದರ್ಶನ ತೋರಿರುವ ಆರಂಭಿಕ ಆಟಗಾರ ಶುಭ್ಮನ್ ಗಿಲ್ ಶತಕದಂಚಿನಲ್ಲಿ ಎಡವಿದ್ದಾರೆ. ಈ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಗಿಲ್ ಉತ್ತಮ ಆಟ ಪ್ರದರ್ಶಿಸಿದ್ದಾರೆ.

144 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸ್ ನೊಂದಿಗೆ 90 ರನ್ ಬಾರಿಸಿ ಶತಕದತ್ತ ದಾಪುಗಾಲಿಟ್ಟಿದ್ದ ಗಿಲ್, ಎಜಾಝ್ ಪಟೇಲ್ ಎಸೆತದಲ್ಲಿ ಸ್ಲಿ ಮಿಚೆಲ್ಗೆ ಕ್ಯಾಚ್ ನೀಡಿದರು. ಈ ಮೂಲಕ ಕೇವಲ 10 ರನ್ ಗಳಿಂದ ಶತಕ ವಂಚಿತರಾದರು.

ಇಲ್ಲಿಯವರೆಗೆ ಶುಭ್ ಮನ್ ಗಿಲ್ ಟೆಸ್ಟ್ ಕ್ರಿಕೆಟ್ ನಲ್ಲಿ 5 ಬಾರಿ ಶತಕ ಗಳಿಸಿದ್ದಾರೆ. ಬಾಂಗ್ಲಾದೇಶ ಹಾಗೂ ಇಂಗ್ಲೆಂಡ್ ವಿರುದ್ಧ ತಲಾ 2 ಶತಕ ಸಿಡಿಸಿದ್ದ ಗಿಲ್, ಆಸ್ಟ್ರೇಲಿಯಾ ವಿರುದ್ಧ 1 ಸೆಂಚುರಿ ಸಿಡಿಸಿದ್ದರು. ನ್ಯೂಜಿಲೆಂಡ್ ವಿರುದ್ಧ ಚೊಚ್ಚಲ ಶತಕ ಬಾರಿಸುವ ಅವಕಾಶ ಹೊಂದಿದ್ದ ಗಿಲ್ ಕೇವಲ ಹತ್ತು ರನ್ ಗಳಿಂದ ಮೂರಂಕಿ ಮೊತ್ತ ತಪ್ಪಿಸಿಕೊಂಡು, ಶತಕ ವಂಚಿದರು.

ಶುಭ್ಮನ್ ಗಿಲ್ ಅವರ 90 ರನ್ ಗಳ ನೆರವಿನಿಂದಾಗಿ 2ನೇ ದಿನದಾಟದ 2ನೇ ಸೆಷನ್ನಲ್ಲಿ 200 ರನ್ ಗಳಿಸಿತು. ಆದರೆ, ಆನಂತರ ಬಂದ ಆಟಗಾರರು ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ಯಡವಿದ್ದಾರೆ. ಪರಿಣಾಮವಾಗಿ 263 ರನ್ ಗಳಿಗೆ ಆಲೌಟ್ ಆಯಿತು. ಈ ಮೂಲಕ ಭಾರತ ತಂಡವು ಮೊದಲ ಇನಿಂಗ್ಸ್ನಲ್ಲಿ ಕೇವಲ 28 ರನ್ಗಳ ಮುನ್ನಡೆ ಪಡೆದುಕೊಂಡಿದೆ.

ಈ ಸುದ್ದಿ ಹಂಚಿಕೊಳ್ಳಿ