ಪ್ರೇಮ ವೈಫಲ್ಯ; ಆತ್ಮಹತ್ಯೆಗೆ ಶರಣಾದ ಯುವಕ

In ಅಪರಾಧ, ಧಾರವಾಡ
September 08, 2024

ಧಾರವಾಡ: ಯುವಕನೊಬ್ಬ ಪ್ರೇಮ‌ ವೈಫಲ್ಯದಿಂದಾಗಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಧಾರವಾಡ (Dharwad)ದ ರೈಲ್ವೆ ನಿಲ್ದಾಣದ ಹತ್ತಿರ ಶ್ರೀನಿವಾಸ್ ಲಾಡ್ಜ್ ನಲ್ಲಿ ಈ ಘಟನೆ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಸಿಗೆಹಡ್ಲು ಕಾಮನಕೆರೆ ನಿವಾಸಿ ಚಿನ್ಮಯ್ ಎಸ್.ಜಿ, ಆತ್ಮಹತ್ಯೆ ಮಾಡಿಕೊಂಡ ಯುವಕ ಎಂದು ಗುರುತಿಸಲಾಗಿದೆ.

ಈ ಯುವಕ ಸೆ. 4ರಂದು ಶ್ರೀನಿವಾಸ್ ಲಾಡ್ಜ್ ನ ರೂಮ್ ನಂ. 212 ರಲ್ಲಿ ಉಳಿದುಕೊಂಡಿದ್ದ. ಸೆ. 6 ರಂದು ಸಂಜೆ ರೂಮ್ ಕ್ಲೀನ್ ಮಾಡಲು ಲಾಡ್ಜ್ ಸಿಬ್ಬಂದಿ ತೆರಳಿದಾಗ ರೂಮ್ ಒಳಗಿನಿಂದ ಲಾಕ್ ಆಗಿದೆ. ಹೀಗಾಗಿ ಮತ್ತೆ ಮರು ದಿನ ರೂಮ್ ಸಿಬ್ಬಂದಿ ರೂಮ್ ಬಾಗಿಲು ತಟ್ಟಿದ್ದಾನೆ. ಆದರೂ ಚಿನ್ಮಯ್ ಬಾಗಿಲು ತೆರೆದಿಲ್ಲ. ಅನುಮಾನಗೊಂಡು ಮತ್ತೊಂದು ಬೀಗ ಬಳಸಿ ಲಾಕ್ ಓಪನ್ ಮಾಡಿದಾಗ, ಈ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ಸುದ್ದಿ ಹಂಚಿಕೊಳ್ಳಿ