ಒಂದೆಡೆ ಬಿಜೆಪಿ ಕಾರ್ಯಕ್ರಮ; ಇನ್ನೊಂದೆಡೆ ಕಳ್ಳರ ದೋಚುವ ತಂತ್ರ!

In ಅಪರಾಧ, ಕೊಡಗು
March 27, 2024

ಮಡಿಕೇರಿ: ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಖದೀಮರು ಕೈ ಚಳಕ ತೋರಿಸಿದ್ದಾರೆ.

ಇಂದು ಮಡಿಕೇರಿಯ ಕುಶಾಲನಗರ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಅಪ್ಪಚ್ಚು ರಂಜನ್ ಹಾಗೂ ಕೆಜಿ‌ ಬೋಪಯ್ಯ ಅವರ ಪರ್ಸ್‌ಗಳು ಕೂಡ ಕಳ್ಳತನವಾಗಿವೆ. ಅಪ್ಪಚ್ಚು ರಂಜನ್ ಪರ್ಸ್ ​ನಲ್ಲಿ 25 ಸಾವಿರ ರೂ. ಹಾಗೂ ಬೋಪಯ್ಯ ಅವರ ಪರ್ಸ್​ ನಲ್ಲಿ 17 ಸಾವಿರ ರೂ. ಇತ್ತು. ಇವರಿಬ್ಬರ ಜೊತೆಗೆ ಇನ್ನೂ ಹಲವರ ಪರ್ಸ್ ಗಳಿಗೆ ಖದೀಮರು ಕನ್ನ ಹಾಕಿದ್ದಾರೆ. ಕಾರ್ಯಕ್ರಮದಲ್ಲಿ ಸದ್ಯದ ಮಾಹಿತಿಯಂತೆ ಬರೋಬ್ಬರಿ 5 ಲಕ್ಷ ರೂ.ಗೂ ಅಧಿಕ ಮೊತ್ತದ ಹಣವನ್ನು ಖದೀಮರು ಕದ್ದಿದ್ದಾರೆ ಎಂದು ತಿಳಿದು ಬಂದಿದೆ.

ಬಿಜೆಪಿ ಅಭ್ಯರ್ಥಿ ಯದುವೀರ್ ಜೊತೆ ಸೆಲ್ಫಿ ತೆಗೆದುಕೊಳ್ಳುವಾಗ ಬೇಕಂತಲೇ ನೂಕು ನುಗ್ಗಲು ಸೃಷ್ಟಿಸಿ ಹಲವರ ಪರ್ಸ್ ಕಳ್ಳತನ ಮಾಡಲಾಗಿದೆ. ಮೊದಲೇ ಪ್ಲಾನ್ ಮಾಡಿ ಬಂದಿದ್ದ ತಂಡದಿಂದ ಈ ಕೃತ್ಯ ನಡೆದಿರಬಹುದು ಎಂದು ಶಂಕಿಸಲಾಗಿದೆ. ಕಳ್ಳರ ಪತ್ತೆಗೆ ಮಡಿಕೇರಿ‌ ನಗರ ಪೊಲೀಸರು ಕಾರ್ಯಚರಣೆ ನಡೆಸಿದ್ದಾರೆ.

ಈ ಸುದ್ದಿ ಹಂಚಿಕೊಳ್ಳಿ