81 views 1 sec 0 comments

ಕಾಶ್ಮೀರದಲ್ಲಿ ನಾಲ್ವರು ಉಗ್ರರು ಅರೆಸ್ಟ್!!

In ದೇಶ
March 24, 2024

ಶ್ರೀನಗರದಲ್ಲಿ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕರನ್ನೇ ಬಂಧಿಸಲಾಗಿದೆ. ಬಂಧಿತರು ನಿಷೇಧಿತ ಉಗ್ರ ಸಂಘಟನೆಯೊಂದಿಗೆ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. ನಗರದ ಹೊರವಲಯದಲ್ಲಿನ ನೌಗಾಮ್‍ನ ಕೆನಿಹಮಾ ಪ್ರದೇಶದಲ್ಲಿ ಚೆಕ್ ಪೋಸ್ಟ್ ಬಳಿ ಭದ್ರತಾ ಪಡೆಗಳು ವಾಹನ ತಡೆದು ನಾಲ್ವರನ್ನು ಬಂಧಿಸಿದ್ದಾರೆ ಎಂದು ಸೇನೆ ಹೇಳಿದೆ.

ಮೊಹಮ್ಮದ್ ಯಾಸೀನ್ ಭಟ್, ಶೆರಾಜ್ ಅಹ್ಮದ್ ರಾಥರ್, ಗುಲಾಮ್ ಹಸನ್ ಖಾಂಡೆ ಹಾಗೂ ಇಮ್ತಿಯಾಜ್ ಅಹ್ಮದ್ ಭಟ್ ಬಂಥಿತರು ಎನ್ನಲಾಗಿದೆ. ಅಲ್ಲದೇ, ಬಂಧಿತರಿಂದ ಅಪಾರ ಪ್ರಮಾಣದ ಶಸ್ತಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಸದ್ಯ ಬಂಧಿತರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಈ ಸುದ್ದಿ ಹಂಚಿಕೊಳ್ಳಿ