ಆಸ್ತಿ ವಿವಾದ; ಅಣ್ಣನ ಮಗಳನ್ನೇ ಕೊಲೆ ಮಾಡಿದ ಪಾಪಿ!

In ಅಪರಾಧ
March 22, 2024

5 ವರ್ಷದ ಬಾಲಕಿಯನ್ನು ಆಕೆಯ ಚಿಕ್ಕಪ್ಪನೇ ಅಪಹರಿಸಿರುವ ಘಟನೆ ನಡೆದಿದೆ.

ಈ ಘಟನೆ ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ. ಬಾಲಕಿಯನ್ನು ಚಿಕ್ಕಪ್ಪನೇ ಅಪಹರಿಸಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಕೊಲೆ ಮಾಡಿರುವ ಆರೋಪಿ ಹಾಗೂ ಬಾಲಕಿಯ ತಂದೆಗೂ ಜಮೀನಿನ ವಿಷಯದಲ್ಲಿ ಜಗಳವಿತ್ತು. ಹೀಗಾಗಿ ಕೋಪದಲ್ಲಿ ಅಣ್ಣನ ಮಗಳನ್ನೇ ಆತ ಅಪಹರಿಸಿದ್ದಾನೆ. ಆನಂತರ 6 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾನೆ.

ಈ ವೇಳೆ ಬಾಲಕಿಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಶೋಧ ಕಾರ್ಯ ನಡೆಸಿದಾಗ ಫರೈರಾ ಗ್ರಾಮದ ಹೊರವಲಯದಲ್ಲಿನ ಸಾಸಿವೆ ತೋಟದಲ್ಲಿ ಬಾಲಕಿಯ ಶವ ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯ ಚಿಕ್ಕಪ್ಪ ಅಮಿತ್ ನನ್ನು ಬಂಧಿಸಲಾಗಿದೆ. ಅಲ್ಲದೇ, ಆತನಿಗೆ ಸಹಾಯ ಮಾಡಿದ್ದ ಪಕ್ಕದ ಹಳ್ಳಿಯ ನಿವಾಸಿ ನಿಖಿಲ್ ಎಂಬಾತನನ್ನು ಕೂಡ ಬಂಧಿಸಲಾಗಿದೆ.

ಈ ಸುದ್ದಿ ಹಂಚಿಕೊಳ್ಳಿ