ಕರ್ತವ್ಯ ಮರೆತ ಚುನಾವಣಾ ಸಿಬ್ಬಂದಿ; ಅಮಾನತು ಭಾಗ್ಯ!

ಚಿತ್ರದುರ್ಗ: ಕರ್ತವ್ಯ ನಿರ್ಲಕ್ಷ್ಯದ ಹಿನ್ನೆಲೆಯಲ್ಲಿ ಮೂವರು ಶಿಕ್ಷಕರನ್ನು ಅಮಾನತು ಮಾಡಲಾಗಿದೆ.

ಚುನಾವಣೆ ಕರ್ತವ್ಯ ನಿರ್ಲಕ್ಷ್ಯಿಸಿದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ. ಈ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಚಿಕ್ಕಪುರ ಗೊಲ್ಲರಹಟ್ಟಿ ಸರ್ಕಾರಿ ಶಾಲಾ ಶಿಕ್ಷಕಿ ಜಯಮ್ಮ ಕೆ ಬಿ, ತೋಪುರ ಮಾಳಿಗೆ ಶಾಲಾ ಶಿಕ್ಷಕಿ ರೂಪಾ ಎಸ್ ಹಾಗೂ ಮಠದ ಕುರುಬರಹಟ್ಟಿ ಶಾಲಾ ಶಿಕ್ಷಕಿ ಕೆ.ಗಿರಿಜಮ್ಮ ಅಮಾನತುಗೊಂಡ ಶಿಕ್ಷಕರು.

ಮತಗಟ್ಟೆ ಅಧಿಕಾರಿಗಳಾಗಿ ಬಿಎಲ್ ಓ ನೇಮಕಗೊಂಡಿದ್ದರು. ಆದರೆ, ಕರ್ತವ್ಯಕ್ಕೆ ಹಾಜರಾಗದೆ ನಿರ್ಲಕ್ಷ ತೋರಿದ ಹಿನ್ನೆಲೆ ಚಿತ್ರದುರ್ಗ ಜಿಲ್ಲಾ‌ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಮಾನತುಗೊಳಿಸಿದ್ದಾರೆ.

ಈ ಸುದ್ದಿ ಹಂಚಿಕೊಳ್ಳಿ