ಕುಡಿದ ಮತ್ತಿನಲ್ಲಿ ಬಾರ್ ಸಿಬ್ಬಂದಿಯ ಕೊಲೆ!

In ಅಪರಾಧ, ಕೊಡಗು
April 22, 2024

ಮಡಿಕೇರಿ: ಕುಡುಕನೋರ್ವ ಕುಡಿದ ಮತ್ತಿನಲ್ಲಿ ಬಾರ್ ಸಿಬ್ಬಂದಿಯನ್ನು ಹತ್ಯೆ ಮಾಡಿರುವ ಘಟನೆ ನಡೆದಿದೆ.

ಈ ಘಟನೆ ಜಿಲ್ಲೆಯ ಕುಶಾಲನಗರದಲ್ಲಿ ಭಾನುವಾರ ರಾತ್ರಿ ನಡೆದಿದೆ. ಕುಶಾಲನಗರದ ಮುಖ್ಯ ರಸ್ತೆಯಲ್ಲಿ ಇರುವ ಬಾರ್ ಹಾಗೂ ರೆಸ್ಟೋರೆಂಟ್ ನಲ್ಲಿಯೇ ಈ ಕೃತ್ಯ ನಡೆದಿದೆ. ನಗರದ ಜನತಾ ಕಾಲೋನಿಯ ಹರ್ಷ ಎಂಬ ಯುವಕ ಕೊಲೆ ಮಾಡಿರುವ ಆರೋಪಿ. ಬಾರ್ ಸಿಬ್ಬಂದಿ ಸಂತೋಷ್‌ನನ್ನು ಬಾಟಲಿಯಿಂದ ಇರಿದು ಕೊಲೆ ಮಾಡಿದ್ದಾನೆ.

ಹರ್ಷ ಕಂಠಪೂರ್ತಿ ಕುಡಿದ ನಂತರ ಬಾರ್ ಸಿಬ್ಬಂದಿ ಸಂತೋಷ್ ಜೊತೆ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದಿದ್ದಾನೆ. ಈ ಸಂದರ್ಭದಲ್ಲಿ ಜಗಳ ವಿಕೋಪಕ್ಕೆ ತೆರಳಿದೆ. ಈ ವೇಳೆ ಬಿಯರ್ ಬಾಟಲ್ ನಿಂದ ಬಾಟಲ್ ನಿಂದ ತಲೆಗೆ ಹೊಡೆದು ಕುತ್ತಿಗೆಗೆ ಇರಿದಿದ್ದಾನೆ. ಈ ವೇಳೆ ತೀವ್ರ ರಕ್ತಸ್ರಾವದಿಂದಾಗಿ ಸಂತೋಷ್ ಸಾವನ್ನಪ್ಪಿದ್ದಾನೆ.

ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈ ಕುರಿತು ಕುಶಾಲನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಹಂಚಿಕೊಳ್ಳಿ