68 views 0 secs 0 comments

ಕೇಜ್ರಿವಾಲ್ ಗೆ 9ನೇ ಸಮನ್ಸ್ ಜಾರಿ ಮಾಡಿದ ಇಡಿ

In ದೇಶ, ರಾಜಕೀಯ
March 17, 2024

ನವದೆಹಲಿ: ಜಾರಿ ನಿರ್ದೇಶನಾಲಯವು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಗೆ 9ನೇ ಬಾರಿ ಸಮನ್ಸ್ ಜಾರಿ ಮಾಡಿದ್ದಾರೆ.

ಅಬಕಾರಿ ನೀತಿ ಪ್ರಕರಣದಲ್ಲಿ ಜಾಮೀನು ಪಡೆದ ಕೆಲವೇ ಗಂಟೆಗಳ ನಂತರ ಜಾರಿ ನಿರ್ದೇಶನಾಲಯ ದೆಹಲಿ ಜಲಮಂಡಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಮತ್ತೊಂದು ಸಮನ್ಸ್ ಜಾರಿ ಮಾಡಿದೆ. ಹಿಂದಿನ ಸಮನ್ಸ್‌ ಗಳನ್ನು ಕಾನೂನುಬಾಹಿರ ಎಂದು ಕರೆದಿದ್ದ ಕೇಜ್ರಿವಾಲ್ ವಿಚಾರಣೆಗೆ ಹಾಜರಾಗಲು ನಿರಾಕರಿಸಿದ್ದರು. ಹೀಗಾಗಿ ಇಡಿ ದೂರು ನೀಡಿತ್ತು. ಶನಿವಾರ ಇ.ಡಿ ನೀಡಿದ ದೂರಿನ ವಿಚಾರಣೆಗಾಗಿ ಅರವಿಂದ್ ಕೇಜ್ರಿವಾಲ್ ರೋಸ್ ಅವೆನ್ಯೂ ಕೋರ್ಟ್‌ ಗೆ ಹಾಜರಾಗಿದ್ದರು. ಕೇಜ್ರಿವಾಲ್ ಅವರಿಗೆ 15 ಸಾವಿರ ರೂ. ಮೌಲ್ಯದ ಶ್ಯೂರಿಟಿ ಬಾಂಡ್ ಹಾಗೂ 1 ಲಕ್ಷ ರೂ.ಗಳ ವೈಯಕ್ತಿಕ ಬಾಂಡ್ ನಿಂದ ಜಾಮೀನು ಪಡೆದಿದ್ದರು.

ಈ ಸುದ್ದಿ ಹಂಚಿಕೊಳ್ಳಿ