68 views 0 secs 0 comments

ಡೆಲ್ಲಿ ಮದ್ಯ ಹಗರಣ; ಕವಿತಾ ಕಸ್ಟಡಿ ಅವಧಿ ವಿಸ್ತರಣೆ

In ದೇಶ
March 26, 2024

ನವದೆಹಲಿ: ಭಾರತ್ ರಾಷ್ಟ್ರ ಸಮಿತಿ ನಾಯಕಿ ಕೆ.ಕವಿತಾ ಅವರಿಗೆ ಏ. 9ರ ವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಲಾಗಿದೆ.

ಮದ್ಯ ನೀತಿ ಹಗರಣದಲ್ಲಿ ಕವಿತಾ ಅವರನ್ನು ಮಾ. 15ರಂದು ಜಾರಿ ನಿರ್ದೇಶನಾಲಯ ಅರೆಸ್ಟ್ ಮಾಡಿತ್ತು. ಸದ್ಯ ಅವರ ಕಸ್ಟಡಿ ಅವಧಿಯನ್ನು ವಿಸ್ತರಿಸಲಾಗಿದೆ. ಕವಿತಾ ಅವರಿಗೆ ದೆಹಲಿ ನ್ಯಾಯಾಲಯವು ಈಗ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಸದ್ಯ ಅವರನ್ನು ಲಾಕಪ್‌ನಲ್ಲಿ ಇರಿಸುವ ಬದಲು ಇ.ಡಿ ತಿಹಾರ್‌ ಜೈಲಿಗೆ ವರ್ಗಾಯಿಸುವ ಸಾಧ್ಯತೆ ಇದೆ. ಬಿಆರ್‌ಎಸ್‌ ನಾಯಕಿ ನಿಜವಾಗಿ 100 ಕೋಟಿ ರೂ. ಅಕ್ರಮ ಹಣ ವರ್ಗಾವಣೆಯಲ್ಲಿ ಭಾಗಿಯಾಗಿದ್ದಾರೆ. ಇದನ್ನು ಎಎಪಿ ನಾಯಕರಿಗೆ ಪಾವತಿಸಲಾಗಿದೆ ಎಂಬ ಆರೋಪ ಹೊತ್ತಿದ್ದಾರೆ.

ತೆಲಂಗಾಣ ಮಾಜಿ ಸಿಎಂ ಕೆ.ಚಂದ್ರಶೇಖರ್ ರಾವ್ ಅವರ ಪುತ್ರಿ ಕವಿತಾ ದೆಹಲಿ ಸರ್ಕಾರದ ಅಡಿಯಲ್ಲಿ ಮದ್ಯದ ಪರವಾನಗಿಗಾಗಿ ಎಎಪಿಗೆ 100 ಕೋಟಿ ಲಂಚ ಪಾವತಿಸಿದ ‘ಸೌತ್ ಗ್ರೂಪ್’ ನ ಪ್ರಮುಖ ಸದಸ್ಯೆ ಎಂದು ಇಡಿ ಆರೋಪಿಸಿದೆ. ಆ ಹಣವನ್ನು ಎಎಪಿ ಪಕ್ಷವು ಗೋವಾ ಹಾಗೂ ಪಂಜಾಬ್ ಚುನಾವಣಾ ಪ್ರಚಾರಕ್ಕಾಗಿ ಬಳಸಿದೆ ಎಂಬ ಆರೋಪ ಕೇಳಿ ಬಂದಿದೆ.

ಈ ಸುದ್ದಿ ಹಂಚಿಕೊಳ್ಳಿ