64 views 0 secs 0 comments

ಪವಾನ್ ಕಲ್ಯಾಣ್ ವಿರುದ್ಧ ಅಖಾಡಕ್ಕೆ ಇಳಿದ ವರ್ಮಾ!

ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಲೋಕಸಭಾ ಚುನಾವಣೆಯಲ್ಲಿ ತಾವು ಕಣಕ್ಕೆ ಇಳಿಯುವುದಾಗಿ ಘೋಷಣೆ ಮಾಡಿದ್ದಾರೆ. ಈ ಬಾರಿ ಖ್ಯಾತ ನಟ ಪವನ್ ಕಲ್ಯಾಣ್ ವಿರುದ್ಧ ಕಣಕ್ಕೆ ಇಳಿಯಲಿದ್ದಾರೆ.

ಪವನ್ ಕಲ್ಯಾಣ್ ಅವರು ಆಂಧ್ರದ ಪಿಠಾಪುರಂ ಕ್ಷೇತ್ರದಿಂದ ಚುನಾವಣೆ ಸ್ಪರ್ಧೆ ಮಾಡಲಿದ್ದಾರೆ ಎನ್ನಲಾಗಿದೆ. ಅದೇ ಕ್ಷೇತ್ರದಲ್ಲೇ ತಾವೂ ಸ್ಪರ್ಧೆ ಮಾಡುವುದಾಗಿ ವರ್ಮಾ ಹೇಳಿಕೊಂಡಿದ್ದಾರೆ.

ಪವನ್ ಕಲ್ಯಾಣ್ ಅವರಿಗೂ ವರ್ಮಾ ಅವರಿಗೂ ಶಿತಲ ಸಮರ ನಡೆಯುತ್ತಲೇ ಇದೆ. ಸಿನಿಮಾಗಳ ಮೂಲಕ ಇವರಿಬ್ಬರ ಗದ್ದಲ ಮತ್ತಷ್ಟು ತಾರಕಕ್ಕೆ ಏರಿದೆ. ಸಾಮಾಜಿಕ ಜಾಲತಾಣದ ಮೂಲಕ ವರ್ಮಾ ಈ ಕುರಿತಂತೆ ಪೋಸ್ಟ್ ಮೂಡಿ, ಕುತೂಹಲ ಮೂಡಿಸಿದ್ದಾರೆ.

ಈ ಸುದ್ದಿ ಹಂಚಿಕೊಳ್ಳಿ