ಮತ್ತೆ ಚಂದನವನಕ್ಕೆ ಕಾಲಿಡುತ್ತಿರುವ ಮೋಹಕ ತಾರೆ!

ಮೋಹಕ ತಾರೆ ರಮ್ಯಾ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

ಸದ್ಯ ರಮ್ಯಾ ಕಮ್‌ ಬ್ಯಾಕ್ ಮಾಡುತ್ತಿರುವ ಸಿನಿಮಾ ಉತ್ತರಕಾಂಡ ಚಿತ್ರದ ಕುರಿತು ಬಿಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. ರಮ್ಯಾ ಈ ಚಿತ್ರದ ಮೂಲಕ ಮರಳಿ ಬರುತ್ತಿರುವ ಹಿನ್ನೆಲೆಯಲ್ಲಿ ಸಾಕಷ್ಟು ನಿರೀಕ್ಷೆ ಮೂಡಿದೆ. ಅಷ್ಟೇ ಅಲ್ಲದೇ, ರಮ್ಯಾ ಜೊತೆ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್, ಡಾಲಿ ಧನಂಜಯ್ ಕೂಡ ನಟಿಸುತ್ತಿದ್ದಾರೆ. ಚಿತ್ರದ ಶೂಟಿಂಗ್ ಇದೇ ಎಪ್ರಿಲ್‌ನಿಂದ ಶುರುವಾಗಲಿದೆ. ಚಿತ್ರೀಕರಣದಲ್ಲಿ ಡಾಲಿ, ರಮ್ಯಾ, ಶಿವಣ್ಣ ಮೂವರು ಭಾಗಿಯಾಗುತ್ತಿದ್ದಾರೆ.

ರತ್ನನ್ ಪ್ರಪಂಚ’ ಖ್ಯಾತಿಯ ನಿರ್ದೇಶಕ ರೋಹಿತ್ ಪದಕಿ ನಿರ್ದೇಶನ ಮಾಡುತ್ತಿದ್ದಾರೆ. ಉತ್ತರಕಾಂಡ ಸಿನಿಮಾ ಪಕ್ಕಾ ಆ್ಯಕ್ಷನ್ ಸೀಕ್ವೇನ್ಸ್ ಇರುವ ಚಿತ್ರವಾಗಿದೆ. ಶಿವಣ್ಣ, ರಮ್ಯಾ, ಡಾಲಿ ಮೂವರು ಒಂದೇ ಸಿನಿಮಾದಲ್ಲಿ ನಟಿಸುತ್ತಿರುವ ಕಾರಣ, ಕಥೆ ಮತ್ತು ಪಾತ್ರ ಹೇಗಿರಲಿದೆ ಎಂಬ ತ್ಸಾಹದಲ್ಲಿ ಅಭಿಮಾನಿಗಳು ಇದ್ದಾರೆ.

ಈ ಸುದ್ದಿ ಹಂಚಿಕೊಳ್ಳಿ