107 views 1 sec 0 comments

ಮೇಘಾಲಯ ಡಿಸಿಎಂ ಮನೆ ಮೇಲೆ ಬಾಂಬ್ ದಾಳಿ; ಬಿಗಿ ಭದ್ರತೆ!

In ದೇಶ
April 27, 2024

ಶಿಲ್ಲಾಂಗ್: ಮೇಘಾಲಯದ ಡಿಸಿಎಂ ಮನೆ ಮೇಲೆ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ದಾಳಿ ನಡೆಸಿರುವ ಘಟನೆ ನಡೆದಿದೆ.

ಪೂರ್ವ ಖಾಸಿ ಹಿಲ್ಸ್‌ನ ನೊಂಗ್‌ಮೆನ್‌ಸಾಂಗ್ ಪ್ರದೇಶದಲ್ಲಿನ ನಿವಾಸದ ಮೇಲೆಯೇ ಈ ದಾಳಿ ನಡೆದಿದೆ. ಉಪ ಮುಖ್ಯಮಂತ್ರಿ ಸ್ನಿಯಾವ್‌ಭಾಲಾಂಗ್ ಧರ್ (Sniawbhalang Dhar) ನಿವಾಸದ ಮೇಲೆ ದುಷ್ಕರ್ಮಿಗಳು ಬಾಂಬ್ ಎಸೆದಿದ್ದಾರೆ. ಸದ್ಯ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಕುರಿತು ಪ್ರಕರಣ ಕೂಡ ದಾಖಲಾಗಿದೆ. ಹೀಗಾಗಿ ಡಿಸಿಎಂ ನಿವಾಸ ಹಾಗೂ ಸುತ್ತಮತ್ತ ಭದ್ರತೆ ಹೆಚ್ಚಿಸಲಾಗಿದೆ. ಯಾವ ಕಾರಣಕ್ಕೆ ಈ ಘಟನೆ ನಡೆದಿದೆ ತಿಳಿದಿಲ್ಲ. ಇದರ ಹೊಣೆಯನ್ನು ಯಾರೂ ಕೂಡ ಹೊತ್ತಿಲ್ಲ.

ಈ ಸುದ್ದಿ ಹಂಚಿಕೊಳ್ಳಿ