ರಾಹುಲ್ ವಿರುದ್ಧ ಏಕವಚನದಲ್ಲಿಯೇ ಮಾತಾಡಿದ ಯತ್ನಾಳ್; ಬುದ್ಧಿ ತೊಡೆಯಲ್ಲಿದೆ!

ಹಿಂದೂಗಳು ಮುಸ್ಲಿಂ ವ್ಯಾಪಾರಿಗಳ ಬಳಿ ವಹಿವಾಟು ಮಾಡಬೇಡಿ; ಯತ್ನಾಳ್

ಹುಬ್ಬಳ್ಳಿ: ರಾಹುಲ್‌ ಗಾಂಧಿ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೊಮ್ಮೆ ನಾಲಿಗೆ ಹರಿ ಬಿಟ್ಟಿದ್ದಾರೆ.

ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ ಪ್ರಹ್ಲಾದ್ ಜೋಶಿ ಪರ ಪ್ರಚಾರದಲ್ಲಿ ಮಾತನಾಡಿದ ಅವರು, ರಾಹುಲ್ ಬುದ್ಧಿ ಮೆದುಳಿನಲ್ಲಿಲ್ಲ, ತೊಡೆಯಲ್ಲಿದೆ. ಡಿಸಿಎಂ ಡಿ.ಕೆ ಶಿವಕುಮಾರ್‌ ಹಾಗೂ ಸಚಿವ ದಿನೇಶ್‌ ಗುಂಡೂರಾವ್ ಹುಚ್ಚರು, ನಮ್ಮ ದೇಶ ಆಳಲು ರಾಹುಲ್ ಸಮರ್ಥನಾ? ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿ ಗೆದ್ರೆ ಬಟಾಟಿಯಿಂದ ಬಂಗಾರ ಬರುತ್ತದೆ. ಇದನ್ನು ರಾಹುಲ್ ಗಾಂಧಿನೇ ಹೇಳಿದ್ದು. ಬಂಗಾರ ಬಂದ್ರೆ ನಮ್ಮ ದೇಶ ಯಾಕೆ ಬಡತನದಲ್ಲಿ ಇರಬೇಕಿತ್ತು ರಾಹುಲ್ಲಾ ಎಂದು ವ್ಯಂಗ್ಯವಾಡಿದ್ದಾರೆ.

ರಾಹುಲ್ ಏನ ಮಾತಾಡ್ತಾನೆ ಅವನಿಗೆ ಗೊತ್ತಿಲ್ಲ. ಮೊನ್ನೆ ರಾಣೆಬೆನ್ನೂರ ಕಡೆ ಬಂದಿದ್ದ, ಈ ವೇಳೆ ಹುಚ್ಚರಾದ ಡಿಕೆ ಶಿವಕುಮಾರ್, ದಿನೇಶ್ ಗುಂಡೂರಾವ್ ಆತನಿಗೆ ಮೆಣಸಿನಕಾಯಿ ತೋರಿಸಿದರು. ಆಗ ಆತ ಕೆಂಪು ಮೆಣಸಿನಕಾಯಿ ಎಲ್ಲರೂ ಏಕೆ ಬೆಳೆದಿದ್ದಾರೆ ಎಂತ ಕೇಳಿದ್ದಾನೆ. ಅಂತವನಿಗೆ ದೇಶ ಕೊಡಬೇಕಾ ಎಂದು ಏಕವಚನದಲ್ಲಿಯೇ ಮಾತನಾಡಿದ್ದಾರೆ.

ಈ ಸುದ್ದಿ ಹಂಚಿಕೊಳ್ಳಿ