ಲಕ್ನೋ ವಿರುದ್ಧ ಗೆದ್ದು ಪ್ಲೇ ಆಫ್ ಪ್ರವೇಶಿಸಿದ ರಾಜಸ್ಥಾನ್!

In ಕ್ರೀಡೆ
April 27, 2024

ಲಕ್ನೋ: ರಾಜಸ್ಥಾನ್ ತಂಡ ರಾಯಲ್ ಆಗಿ ಆಡುತ್ತಿದ್ದು, ಲಕ್ನೋ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ ಪ್ಲೇ ಆಫ್ ಪ್ರವೇಶ ಮಾಡಿದೆ.

ಸಂಜು ಸ್ಯಾಮ್ಸನ್‌, ಧ್ರುವ್‌ ಜುರೆಲ್‌ (Dhruv Jurel, Sanju Samson) ಸ್ಫೋಟಕ ಅರ್ಧಶತಕಗಳ ನೆರವಿನಿಂದಾಗಿ ಲಕ್ನೋ ಸೂಪರ್‌ ಜೈಂಟ್ಸ್‌ (LSG) ವಿರುದ್ಧ 7 ವಿಕೆಟ್‌ಗಳ ಜಯ ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ಲಕ್ನೋ ತಂಡವು 5 ವಿಕೆಟ್‌ ಕಳೆದುಕೊಂಡು 196 ರನ್‌ ಗಳಿಸಿತ್ತು. ದೊಡ್ಡ ಮೊತ್ತದ ಗುರಿ ಬೆನ್ನಟ್ಟಿದ್ದ ರಾಜಸ್ಥಾನ್ ತಂಡ 19 ಓವರ್‌ಗಳಲ್ಲೇ 199 ರನ್‌ ಗಳಿಸಿ ಗೆಲುವಿನ ದಡ ಸೇರಿತು. ಈ ಮೂಲಕ ಪ್ಲೇ ಆಫ್ ಪ್ರವೇಶ ಮಾಡಿದ ಮೊದಲ ತಂಡವಾಯಿತು.

9 ಪಂದ್ಯಗಳ ಪೈಕಿ 8ರಲ್ಲಿ ಗೆಲುವು ಸಾಧಿಸಿರುವ ರಾಜಸ್ಥಾನ್‌ ರಾಯಲ್ಸ್‌ ತಂಡವು 16 ಅಂಕ ಪಡೆಯುವ ಮೂಲಕ ಪ್ಲೇ ಆಫ್ ಗೆ ಎಂಟ್ರಿ ಕೊಟ್ಟಿತು. ಬೃಹತ್ ಟಾರ್ಗೆಟ್ ಬೆನ್ನಟ್ಟಿದ್ದ ರಾಜಸ್ಥಾನ್ ಕೂಡ ಆರಂಭದಲ್ಲಿ ಆಘಾತದಲ್ಲಿತ್ತು. ನಂತರ ಜೊತೆಗೂಡಿದ ಧ್ರುವ್‌ ಜುರೆಲ್‌ ಮತ್ತು ಸಂಜು ಸ್ಯಾಮ್ಸನ್‌ ಜೋಡಿ ಮುರಿಯದ 4ನೇ ವಿಕೆಟ್‌ಗೆ 62 ಎಸೆತಗಳಲ್ಲಿ 121 ರನ್‌ಗಳ ಜೊತೆಯಾಟ ನೀಡಿತು. ಆರ್ ಆರ್ ಪರ ಸ್ಯಾಮ್ಸನ್ 33 ಎಸೆತಗಳಲ್ಲಿ 71 ರನ್‌ (4 ಸಿಕ್ಸರ್‌, 7 ಬೌಂಡರಿ), ಧ್ರುವ್‌ ಜುರೆಲ್‌ 52 ರನ್‌ (2 ಸಿಕ್ಸರ್‌, 5 ಬೌಂಡರಿ), ಯಶಸ್ವಿ ಜೈಸ್ವಾಲ್‌ 24 ರನ್‌, ಜೋಸ್‌ ಬಟ್ಲರ್‌ 34 ರನ್‌ ಹಾಗೂ ರಿಯಾನ್‌ ಪರಾಗ್‌ 14 ರನ್‌ ಗಳಿಸಿ ಗೆಲುವಿನಲ್ಲಿ ಪಾತ್ರ ವಹಿಸಿದರು.

ಲಕ್ನೋ ಸೂಪರ್‌ ಜೈಂಟ್ಸ್‌ ತಂಡ ವಿಕೆಟ್‌ ಕಳೆದುಕೊಂಡ ಹೊರತಾಗಿಯೂ ಬೃಹತ್‌ ಮೊತ್ತ ಗಳಿಸಿತು. ಕೆ.ಎಲ್‌ ರಾಹುಲ್‌ ಮತ್ತು ದೀಪಕ್‌ ಹೂಡ ಅವರ ಜವಾಬ್ದಾರಿಯುತ ಅರ್ಧಶತಕಗಳ ಬ್ಯಾಟಿಂಗ್‌ ನೆರವಿನಿಂದ ಲಕ್ನೋ ತಂಡ ಬೌಲಿಂಗ್‌ ಪಿಚ್‌ ನಲ್ಲೂ 190 ರನ್ ಗಡಿ ದಾಟಿತು. ಕೆ.ಎಲ್‌ ರಾಹುಲ್‌ 76 ರನ್‌ (48 ಎಸೆತ, 2 ಸಿಕ್ಸರ್‌, 8 ಬೌಂಡರಿ), ದೀಪಕ್‌ ಹೂಡ 31 ಎಸೆತಗಳಲ್ಲಿ 7 ಬೌಂಡರಿಗಳೊಂದಿಗೆ 50 ರನ್‌ ಗಳಿಸಿದರು.

ಈ ಸುದ್ದಿ ಹಂಚಿಕೊಳ್ಳಿ