ವಿದ್ಯಾರ್ಥಿಗಳಿಗೆ ಸೇರಬೇಕಿದ್ದ ಹಣ ಬಳಸಿಕೊಂಡಿದ್ದ ಶಿಕ್ಷಕ!

In ಕೊಪ್ಪಳ, ರಾಜ್ಯ
March 14, 2024

ಕೊಪ್ಪಳ: ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಹಾಕಬೇಕಿದ್ದ ಹಣವನ್ನು ಶಿಕ್ಷಕ ತಾನೇ ಬಳಸಿಕೊಂಡಿರುವ ಘಟನೆಯೊಂದು ಜಿಲ್ಲೆಯ ಕನಕಗಿರಿ ತಾಲೂಕಿನ ಬೈಲಕ್ಕಂಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದಿದೆ.

ಉಮೇಶ ಎಂಬ ಮುಖ್ಯ ಶಿಕ್ಷಕನ ಮೇಲೆ ಹಣ ದುರ್ಬಳಕೆಯ ಆರೋಪ ಕೇಳಿ ಬಂದಿದೆ. ವಿದ್ಯಾರ್ಥಿಗಳಿಗೆ ಸೇರಬೇಕಿದ್ದ 20 ಸಾವಿರ ರೂಪಾಯಿ ಸ್ವಂತಕ್ಕೆ ಬಳಸಿಕೊಂಡಿದ್ದಾರೆ. ಕೊರೊನಾ ಸಂದರ್ಭದಲ್ಲಿ ಬಿಸಿಯೂಟದ ಹಣವನ್ನು ವಿದ್ಯಾರ್ಥಿಗಳ ಖಾತೆಗೆ ಹಾಕಲು ಸರ್ಕಾರ ಸೂಚನೆ ನೀಡಿತ್ತು.

ಪ್ರತಿ ವಿದ್ಯಾರ್ಥಿಗೆ 248 ರೂಪಾಯಿ ಡಿಬಿಟಿ ಮೂಲಕ ನೀಡಬೇಕಿತ್ತು. ಡಿಬಿಟಿ ಮಾಡಬೇಕಾದ ಹಣವನ್ನು ಸ್ವಂತ ಖಾತೆಗೆ ಮುಖ್ಯ ಶಿಕ್ಷಕ ಹಾಕಿಸಿಕೊಂಡಿದ್ದ. ಆದರೆ, ಇಲಾಖೆಯ ತನಿಖೆಯಿಂದ ಎಚ್ಚೆತ್ತು, ವಿದ್ಯಾರ್ಥಿಗಳ ಕುಟುಂಬಸ್ಥರಿಗೆ ಹಣ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಈ ಸುದ್ದಿ ಹಂಚಿಕೊಳ್ಳಿ