ವಿಶ್ವಕಪ್ ಗೆ ಭಾರತೀಯ ತಂಡ ಪ್ರಕಟ; ರಾಹುಲ್ ಔಟ್!

In ಕ್ರೀಡೆ
April 30, 2024

ಮುಂಬಯಿ: ಟಿ20 ವಿಶ್ವಕಪ್‍ ಗಾಗಿ (T20 World Cup) ಟೀಂ ಇಂಡಿಯಾ (Team India) ತಂಡ ಪ್ರಕಟವಾಗಿದ್ದು, 15 ಜನರ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದೆ.

ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪ ನಾಯಕ), ಯಶಸ್ವಿ ಜೈಶ್ವಾಲ್, ವಿರಾಟ್ ಕೊಹ್ಲಿ, ಎಸ್.ದುಬೆ, ರವಿಂದ್ರ ಜಡೇಜಾ, ಅಕ್ಸರ್ ಪಟೇಲ್, ಕುಲದೀಪ್ ಯಾದವ್, ಅರ್ಷ್‍ದೀಪ್ ಸಿಂಗ್, ಯುಜ್ವೇಂದ್ರ ಚಾಹಲ್, ಜಸ್ಪ್ರೀತ್ ಬುಮ್ರಾ, ಮಹಮ್ಮದ್ ಸಿರಜ್, ವಿಕೆಟ್ ಕಿಪರ್‍ಗಳಾಗಿ ರಿಷಬ್ ಪಂತ್, ಎಸ್.ಸ್ಯಾಮ್ಸನ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಮೀಸಲು ಆಟಗಾರರನ್ನಾಗಿ ಶುಭಮನ್ ಗಿಲ್, ಖಲೀಲ್ ಅಹ್ಮದ್, ರಿಂಕು ಸಿಂಗ್, ಅವೇಶ್ ಖಾನ್ ಇದ್ದಾರೆ. ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಗಳು ಜೂನ್ 1 ರಿಂದ ಪ್ರಾರಂಭವಾಗಲಿವೆ. ಅಮೆರಿಕ ಮತ್ತು ವೆಸ್ಟ್ ಇಂಡೀಸ್‍ ನಲ್ಲಿ ನಡೆಯಲಿವೆ. ಅಲ್ಲದೇ, ಇದೇ ಮೊದಲ ಬಾರಿಗೆ ಅಮೆರಿಕದಲ್ಲಿ ಟಿ20 ಟೂರ್ನಿ ಆರಂಭವಾಗಲಿದೆ. ಐಸಿಸಿಯು ಈಗಾಗಲೇ ವಿಶ್ವಕಪ್ ತಂಡದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಜೂನ್ 9 ರಂದು ಭಾರತ ಹಾಗೂ ಬದ್ಧ ವೈರಿ ಪಾಕ್ ಮಧ್ಯೆ ಪಂದ್ಯ ನಡೆಯಲಿದೆ.

ಈ ಸುದ್ದಿ ಹಂಚಿಕೊಳ್ಳಿ