ಸೋಲಿನಲ್ಲೂ ಎರಡು ಭರ್ಜರಿ ದಾಖಲೆ ಬರೆದ ಕಿಂಗ್!

In ಕ್ರೀಡೆ
March 23, 2024

ಚೆನ್ನೈ: ಈಗಾಗಲೇ 17ನೇ ಆವೃತ್ತಿ ಐಪಿಎಲ್‌ ಗೆ ಚಾಲನೆ ಸಿಕ್ಕಿದೆ ಮೊದಲ ಪಂದ್ಯದಲ್ಲಿ ಬೆಂಗಳೂರು ತಂಡ ಚೆನ್ನೈ ವಿರುದ್ಧ ಸೋಲು ಕಂಡಿದೆ. ಇದೇ ಪಂದ್ಯದಲ್ಲಿ ಕಿಂಗ್ ಕೊಹ್ಲಿ ಎರಡೆರಡು ದಾಖಲೆ ಬರೆದಿದ್ದಾರೆ.

ಈ ಪಂದ್ಯದಲ್ಲಿ 21 ರನ್‌ ಗಳಿಸುವ ಮೂಲಕ ಎರಡೆರಡು ದಾಖಲೆ ಮಾಡಿದ್ದಾರೆ. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ್ದ ರಾಯಲ್‌ ಚಾಲೆಂಜರ್ಸ್‌, ಮೊದಲು ಅಬ್ಬರಿಸಿ ಆನಂತರ ಫಟಾ ಫಟಾ ವಿಕೆಟ್ ಕಳೆದುಕೊಂಡಿತು. ಈ ವೇಳೆ ನಿಧಾನಗತಿಯ ಬ್ಯಾಟಿಂಗ್‌ ಮಾಡಿ 1 ಸಿಕ್ಸರ್‌ ಜೊತೆಗೆ 21 ರನ್‌ ಗಳಿಸಿದ ಕೊಹ್ಲಿ, ಟಿ20 ಕ್ರಿಕೆಟ್‌ ನಲ್ಲಿ ಎರಡು ತಂಡಗಳ ವಿರುದ್ಧ 1 ಸಾವಿರ ರನ್ ಪೂರೈಸಿದ ಮೊದಲ ಭಾರತೀಯ ಬ್ಯಾಟರ್ ಎನಿಸಿಕೊಂಡರು. ಅಲ್ಲದೇ ಟಿ20 ಕ್ರಿಕೆಟ್‌ನಲ್ಲಿ ವೇಗವಾಗಿ 12,000 ರನ್‌ ಪೂರೈಸಿದ ಮೊದಲ ಭಾರತೀಯ ಹಾಗೂ ವಿಶ್ವದ 2ನೇ ಆಟಗಾರ ಕೂಡ ಆದರು.

ವೆಸ್ಟ್‌ ಇಂಡೀಸ್‌ ತಂಡದ ಮಾಜಿ ಆಟಗಾರ ಕ್ರಿಸ್‌ ಗೇಲ್‌ 343 ಇನ್ನೀಂಗ್ಸ್‌ಗಳಲ್ಲಿ 12 ಸಾವಿರ ರನ್ ಪೂರೈಸಿದ್ದರೆ, ವಿರಾಟ್‌ 360 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ.

ಈ ಸುದ್ದಿ ಹಂಚಿಕೊಳ್ಳಿ