71 views 0 secs 0 comments

ಹೋಟೆಲ್ ನಲ್ಲಿ ಬೆಂಕಿ ಅವಘಡ; 6 ಜನ ಸಾವು, 10 ಜನರ ಸ್ಥಿತಿ ಗಂಭೀರ!

In ದೇಶ
April 25, 2024

ಪಾಟ್ನಾ: ನಗರದಲ್ಲಿನ ರೈಲ್ವೆ ನಿಲ್ದಾಣದ ಹತ್ತಿರವಿದ್ದ ಹೋಟೆಲ್ ಗಳಲ್ಲಿ ಭಾರೀ ಪ್ರಮಾಣದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು 6 ಜನ ಸಾವನ್ನಪ್ಪಿರುವ ಘಟನೆ ನಡೆದಿದೆ.

ಅಲ್ಲದೇ, ಘಟನೆಯಲ್ಲಿ ಕನಿಷ್ಠ 10 ಜನ ಗಾಯಗೊಂಡಿದ್ದಾರೆ. ರೈಲ್ವೆ ನಿಲ್ದಾಣದ ಹತ್ತಿರದಲ್ಲಿರುವ ಪಾಲ್ ಹೋಟೆಲ್‌ ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಅದನ್ನು ನಂದಿಸುವಷ್ಟರಲ್ಲಿಯೇ ಪಕ್ಕದ ಕಟ್ಟಡಳಿಗೆ ಅದು ವ್ಯಾಪಿಸಿತ್ತು. ಹೀಗಾಗಿ 6 ಜನ ಸಾವನ್ನಪ್ಪಿ, 10 ಜನ ಗಾಯಗೊಂಡಿದ್ದಾರೆ.

ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ದೊಡ್ಡ ಅನಾಹುತ ತಪ್ಪಿಸಿದ್ದಾರೆ. ಬೆಂಕಿಯಲ್ಲಿ ಸಿಲುಕಿದವರನ್ನು ಹೊರ ತೆಗೆಯಲಾಗಿದೆ. ಗಾಯಾಗಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲವರು ಶೇ. 95ರಷ್ಟು ಸುಟ್ಟ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಇನ್ನೂ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ. ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವವರನ್ನು, ಪೂನಂ ದೇವಿ, ಆಮ್ಲೇಶ್ ತಿವಾರಿ, ಗೋರಖ್ ಕುಮಾರ್, ಅನುರಾಗ್ ಸಿಂಗ್, ಜಿತೇಂದ್ರ ಕುಮಾರ್, ರೋಹಿತ್ ಕುಮಾರ್, ಅರವಿಂದ್ ತಿವಾರಿ ಎಂದು ಗುರುತಿಸಲಾಗಿದೆ.

ಈ ಸುದ್ದಿ ಹಂಚಿಕೊಳ್ಳಿ