56 ವರ್ಷಗಳಿಂದಲೂ ಮಹಿಳೆಯ ಗರ್ಭದಲ್ಲಿ ಇದ್ದ ಭ್ರೂಣ

In ವಿದೇಶ
March 26, 2024

ಬ್ರೆಸಿಲಿಯಾ: 81 ವರ್ಷದ ಮಹಿಳೆಯ ಹೊಟ್ಟೆಯಲ್ಲಿ 56 ವರ್ಷಗಳಿಂದ ಭ್ರೂಣವನ್ನು ಇದ್ದ ಘಟನೆಯೊಂದು ನಡೆದಿದ್ದು, ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ಮಹಿಳೆ ಈಗ ಸಾವನ್ನಪ್ಪಿದ್ದಾರೆ.

ಡೇನಿಯಲಾ ವೆರಾ ಎಂಬ ಮಹಿಳೆಯು ಯೌವನಾವಸ್ಥೆಯಲ್ಲಿ ಅಪಸ್ಥಾನೀಯ ಗರ್ಭಾವಸ್ಥೆ ಅಂದರೆ ಗರ್ಭಕೋಶದ ಮುಖ್ಯ ಭಾಗದ ಹೊರಗೆ ಭ್ರೂಣ ಬೆಳೆಯುವುದು ಎಂಬ ರೋಗಕ್ಕೆ ತುತ್ತಾಗಿದ್ದರು. ಹೊಟ್ಟೆ ಭಾಗದಲ್ಲಿ ಊತ ಹಾಗೂ ನೋವು ಉಂಟಾಗುತ್ತಿದೆ ಎಂದು ಅವರು ಅನೇಕ ಬಾರಿ ವೈದ್ಯರನ್ನು ಸಂಪರ್ಕಿಸಿದ್ದರು. ಆದರೆ ತಪಾಸಣೆ ವೇಳೆ ಹೊಟ್ಟೆಯಲ್ಲಿ ಭ್ರೂಣ ಇರುವುದನ್ನು ವೈದ್ಯರು ಪತ್ತೆ ಮಾಡಿಲ್ಲ. ಆದರೆ, ಮಹಿಳೆಗೆ ನೀರಿನ ಸೋಂಕಿನ ಸಮಸ್ಯೆಗೆ ಚಿಕಿತ್ಸೆ ನೀಡುತ್ತಿದ್ದರು.

ಈ ಸಮಸ್ಯೆಯ ಮಧ್ಯೆಯೂ ವೆರಾ 7 ಮಕ್ಕಳನ್ನು ಹೆತ್ತಿದ್ದರು. ಆದರೆ, ಇತ್ತೀಚೆಗೆ 3ಡಿ ಸ್ಕ್ಯಾನ್‌ ಮಾಡಿಸಿದ್ದು, ಈ ವಿಷಯ ಬೆಳಕಿಗೆ ಬಂದಿದೆ. ಆನಂತರ 81 ವರ್ಷದ ವೆರಾ ಸರ್ಜರಿಗೆ ಒಳಗಾಗಿದ್ದರು. ಗರ್ಭ ಧರಿಸಿದಾಗ ಅದು ಗರ್ಭಕೋಶದ ಒಳಗೆ ಬೆಳೆಯಬೇಕು. ಆದರೆ ಕೆಲವು ಸನ್ನಿವೇಶಗಳಲ್ಲಿ ಅದು ಹೊರಗೆ ಸಹ ಉಂಟಾಗಬಹುದು ಎಂದು ವೈದ್ಯರು ಹೇಳಿದ್ದಾರೆ. ಸದ್ಯ ಮಹಿಳೆ ಸಾವನ್ನಪ್ಪಿದ್ದು, ಮಕ್ಕಳು ಅಮ್ಮನಿಗೆ ವಯಸ್ಸಾಗಿತ್ತು. ಆಸ್ಪತ್ರೆ ಎಂದರೆ ಭಯವಾಗುತ್ತಿತ್ತು. ತನ್ನ ಹೊಟ್ಟೆಯ ಒಳಗೆ ಮಗು ಓಡಾಡಿದಂತೆ ಅನಿಸುತ್ತದೆ ಎಂದು ಆಗಾಗ ಹೇಳುತ್ತಿದ್ದರು. ನಾವೂ ಇದನ್ನು ಊಹಿಸಿರಲಿಲ್ಲ ಎಂದು ಹೇಳಿದ್ದಾರೆ.

ಈ ಸುದ್ದಿ ಹಂಚಿಕೊಳ್ಳಿ