ಆರ್ ಸಿಬಿ ಆಟಗಾರರಿಗೆ ಭರ್ಜರಿ ಸ್ವಾಗತ!

In ಕ್ರೀಡೆ
May 21, 2024

ಐಪಿಎಲ್ (IPL 2024) ಸೀಸನ್ 17 ರ ಪ್ಲೇ ಆಫ್ ಪಂದ್ಯಗಳು ಇಂದಿನಿಂದ ಆರಂಭವಾಗಲಿವೆ. ಆದರೆ, ಮೇ 22 ರಂದು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆರ್ ಸಿಬಿ ಪಂದ್ಯವು ರಾಜಸ್ಥಾನ್ ವಿರುದ್ಧ ಸೆಣಸಾಟ ನಡೆಸಲಿದೆ. ಈ ಮಧ್ಯೆ ಆಟಗಾರರಿಗೆ ಭವ್ಯ ಸ್ವಾಗತ ಕೋರಲಾಯಿತು.

ಈಗಾಗಲೇ ಆರ್ ಸಿಬಿ ಆಟಗಾರರು ಅಹಮದಾಬಾದ್ ಗೆ ಬಂದಿಳಿದಿದ್ದಾರೆ. ಆಟಗಾರರು ಬರುತ್ತಿದ್ದಂತೆ ಸಾಂಪ್ರದಾಯಿಕ ರೀತಿಯಲ್ಲಿ ತಿಲಕವಿಟ್ಟು, ಪಟ್ಟಾ ನೀಡಿ, ಪುಷ್ಪಾರ್ಚನೆ ಮಾಡುವ ಮೂಲಕ ಸ್ವಾಗತಿಸಲಾಯಿತು. ಸ್ವಾಗತದ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಈ ಫೋಟೋಗಳನ್ನು ಆರ್ ಸಿಬಿ ಹಂಚಿಕೊಂಡಿದೆ. ಐಪಿಎಲ್ ಇತಿಹಾಸದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಒಟ್ಟು 31 ಬಾರಿ ಮುಖಾಮುಖಿಯಾಗಿವೆ. ಆರ್ ಸಿಬಿ 15 ಬಾರಿ ಜಯ ಸಾಧಿಸಿದ್ದರೆ, ರಾಜಸ್ಥಾನ್ 13 ಬಾರಿ ಗೆಲುವು ಕಂಡಿದೆ. ಮೂರು ಬಾರಿ ಮಳೆಯಿಂದ ಪಂದ್ಯ ರದ್ದಾಗಿವೆ. ಸದ್ಯದ ಸ್ಥಿತಿಯಲ್ಲಿ ಉಭಯ ತಂಡಗಳು ಸಮಬಲ ಹೊಂದಿವೆ. ಆದರೆ, ಯಾರು ಗೆಲ್ಲುತ್ತಾರೆ ಎಂಬುವುದು ಕುತೂಹಲ ಮೂಡಿದೆ.

ಈ ಸುದ್ದಿ ಹಂಚಿಕೊಳ್ಳಿ