50 views 0 secs 0 comments

ರಾಜ್ಯದ ಕ್ರೀಡಾಪಟುಗಳ ಅದ್ಭುತ ಸಾಧನೆ!!

In ದೇಶ, ಕ್ರೀಡೆ
January 07, 2025

15ನೇ ನ್ಯಾಷನಲ್ ಫೀಲ್ಡ್ ಆರ್ಚರಿ ಚಾಂಪಿಯನ್‌ ಶಿಪ್‌ ನಲ್ಲಿ ಕರ್ನಾಟಕದ ಕ್ರೀಡಾಪಟುಗಳು ಅದ್ಭುತ ಸಾಧನೆ ಮಾಡಿದ್ದಾರೆ.

ಕರ್ನಾಟಕ ತಂಡ ಪ್ರತಿನಿಧಿಸಿದ್ದ ಆನೇಕಲ್ ತಾಲ್ಲೂಕಿನ 12 ಜನ ಕ್ರೀಡಾಪಟುಗಳು ಅದ್ಭುತ ಸಾಧನೆ ಮಾಡಿದ್ದಾರೆ.
ಲಖನೌನಲ್ಲಿ ಡಿ. 26ರಿಂದ 29ವರೆಗೆ ನಡೆದಿದ್ದ 15ನೇ ನ್ಯಾಷನಲ್ ಫೀಲ್ಡ್ ಆರ್ಚರಿ ಚಾಂಪಿಯನ್‌ ಶಿಪ್ ನಲ್ಲಿ ಕರ್ನಾಟಕದ ವಿದ್ಯಾರ್ಥಿಗಳು 2 ಚಿನ್ನದ ಪದಕ, 7 ಬೆಳ್ಳಿ ಪದಕ, 3 ಕಂಚಿನ ಪದಕ ಗೆದ್ದ ಸಾಧನೆ ಮಾಡಿದ್ದಾರೆ.
ತೇಜಿನಿ ರಾಜೇಶ್, ರಿಷಿಕಾ ನಿವೇದನಾ ಚಿನ್ನದ ಪದಕ ಗೆದ್ದರೆ, ಸಾಶ್ರಿಕಾ ರಾಜೇಶ್, ಶಿಜಾ ಶೆರೀಫ್, ಸೋನಲ್ ಅಮಿತ್ ರಾಣೆ, ತನಿಷಿ ಸಿಂಗ್, ಅರೋಹಿ ಅಮರ್, ಹೇಮಂಶಿಲ್ ಬೆಳ್ಳಿ ಪದಕ ಗೆದ್ದಿದ್ದಾರೆ.

ನಶ್ವಾ ಜೈಸಾ, ಸೋಹನ್ ಗೌಡ, ಸಾನ್ವಿ ರೆಡ್ಡಿ ಬಿ.ವಿ ಕಂಚಿನ ಪದಕ ಗೆದ್ದಿದ್ದಾರೆ. ದೇಶದ 22 ರಾಜ್ಯಗಳಿಂದ ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಕರ್ನಾಟಕದಿಂದಲೂ 36 ಜನ ಕ್ರೀಡಾಪಟುಗಳು ಭಾಗವಹಿಸಿದ್ದರು. ಆದರೆ, ಈ ಪೈಕಿ ಹಲವರು ಉತ್ತಮ ಸಾಧನೆ ಮಾಡಿದ್ದು, ಹೆಮ್ಮೆಯ ಸಂಗತಿಯಾಗಿದೆ.

ಈ ಸುದ್ದಿ ಹಂಚಿಕೊಳ್ಳಿ