ಕಂದಕಕ್ಕೆ ಬಿದ್ದು ಸಾವನ್ನಪ್ಪಿದ ಕಾಡಾನೆ!

In ಮೈಸೂರು
October 04, 2024

ಮೈಸೂರು: ಕಂದಕಕ್ಕೆ ಬಿದ್ದು ಕಾಡಾನೆಯೊಂದು ಸಾವನ್ನಪ್ಪಿರುವ ಘಟನೆ ನಡೆದಿದೆ.

ಈ ಘಟನೆ ಜಿಲ್ಲೆಯ ನಂಜನಗೂಡು (Najanagudu) ತಾಲೂಕಿನ ಕೆಲ್ಲುಪುರ ಗ್ರಾಮದ ಮಲ್ಲಹಳ್ಳಿ ಹತ್ತಿರ ನಡೆದಿದೆ. ಘಟನೆಯಲ್ಲಿ ಸುಮಾರು 40 ವರ್ಷಗಳ ಗಂಡು ಆನೆ ಕಂದಕಕ್ಕೆ ಬಿದ್ದು ಸಾವನ್ನಪ್ಪಿದೆ. ಮಲ್ಲಹಳ್ಳಿ ಗ್ರಾಮದ ಹತ್ತಿರ ಆನೆಗಳ ಹಾವಳಿ ತಪ್ಪಿಸುವ ನಿಟ್ಟಿನಲ್ಲಿ ಆನೆ ಕಂದಕಗಳನ್ನು ನಿರ್ಮಿಸಲಾಗಿತ್ತು.

ಆಹಾರ ಅರಸಿ ಬರುತ್ತಿದ್ದ ಸಂದರ್ಭದಲ್ಲಿ ಕಂದಕಕ್ಕೆ ಆನೆ ಬಿದ್ದಿದೆ. ಕಾಡಿನಿಂದ ನಾಡಿನ ಕಡೆ ಬರುತ್ತಿದ್ದ ಸಂದರ್ಭದಲ್ಲಿ ಆನೆ ಕಂದಕಕ್ಕೆ ಗೊತ್ತಾಗದೆ ಬಿದ್ದಿದೆ. ಆದರೆ, ಇದನ್ನು ಯಾರೂ ಗಮನಿಸದ ಹಿನ್ನೆಲೆಯಲ್ಲಿ ಆನೆ ಒದ್ದಾಡಿ ಸಾವನ್ನಪ್ಪಿದೆ.

ಈ ಸುದ್ದಿ ಹಂಚಿಕೊಳ್ಳಿ