ಗಾಂಧೀಜಿ ದೇಶದ ಪಿತಾಮಹ ಅಲ್ಲ ಎಂದು ವಿವಾದ ಸೃಷ್ಟಿಸಿದ ಕಂಗನಾ

ನವದೆಹಲಿ: ಸಂಸದೆ ಹಾಗೂ ನಟಿ ಕಂಗನಾ ರಣಾವತ್ ಮತ್ತೊಂದು ವಿವಾದಕ್ಕೆ ಕಾರಣರಾಗಿದ್ದಾರೆ.

“ದೇಶ್ ಕೆ ಪಿತಾ ನಹೀ, ದೇಶ್ ಕೆ ತೋ ಲಾಲ್ ಹೋತೇ ಹೈ. ಧನ್ಯೇ ಹೈ ಭಾರತ್ ಮಾ ಕೆ ಯೇ ಲಾಲ್ (ದೇಶಕ್ಕೆ ತಂದೆ ಇಲ್ಲ, ಅದಕ್ಕೆ ಮಕ್ಕಳಿದ್ದಾರೆ. ಭಾರತಮಾತೆಯ ಈ ಮಕ್ಕಳು ಧನ್ಯರು)” ಎಂದು ಕಂಗನಾ ರಣಾವತ್ ಇನ್ ಸ್ಟಾಗ್ರಾಂ ಸ್ಟೋರಿಯಲ್ಲಿ ಹೇಳಿದ್ದಾರೆ. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನು ಮಹಾತ್ಮಾ ಗಾಂಧಿಯೊಂದಿಗೆ ಹೋಲಿಸಿದ ಅವರ ಹೇಳಿಕೆಯು ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನಾಟೆ ಅವರಿಂದ ತೀಕ್ಷ್ಣವಾದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಂಗನಾ ಬಿಜೆಪಿಯ “ಹೊಸ ಗೋಡ್ಸೆ ಭಕ್ತೆ” ಎಂದು ಅವರು ಆರೋಪಿಸಿದ್ದರು.

ಬಿಜೆಪಿ ಸಂಸದೆ ಕಂಗನಾ ರಣಾವತ್ ಮಹಾತ್ಮಾ ಗಾಂಧಿಯವರ ಜನ್ಮದಿನದಂದು ವ್ಯತಿರಿಕ್ತವಾಗಿ ನಡೆದುಕೊಂಡಿದ್ದಾರೆ. ಗೋಡ್ಸೆ ಆರಾಧಕರು ಬಾಪು ಮತ್ತು ಶಾಸ್ತ್ರಿ ಅವರ ನಡುವೆ ವ್ಯತ್ಯಾಸವನ್ನು ತೋರಿಸುತ್ತಾರೆ. ಪಿಎಂ ನರೇಂದ್ರ ಮೋದಿ ಅವರು ತಮ್ಮ ಪಕ್ಷದ ಹೊಸ ಗೋಡ್ಸೆ ಭಕ್ತಳನ್ನು ಮನಃಪೂರ್ವಕವಾಗಿ ಕ್ಷಮಿಸುವರೇ? ರಾಷ್ಟ್ರಪಿತ ಇದ್ದಾರೆ, ಪುತ್ರರಿದ್ದಾರೆ. ಹುತಾತ್ಮರಾದವರು ಎಲ್ಲರೂ ಗೌರವಕ್ಕೆ ಅರ್ಹರು ಎಂದು ಸುಪ್ರಿಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗಷ್ಟೇ 2021ರಲ್ಲಿ ರದ್ದುಗೊಂಡಿದ್ದ ಮೂರು ಕೃಷಿ ಕಾನೂನುಗಳನ್ನು ಮರು ಸ್ಥಾಪಿಸಲು ಪ್ರತಿಪಾದಿಸಿದ್ದಕ್ಕಾಗಿ ಕಂಗನಾ ರಣಾವತ್ ವಿರುದ್ಧ ಆಕ್ರೋಶ ಕೇಳಿ ಬಂದಿದ್ದವು.

ಈ ಸುದ್ದಿ ಹಂಚಿಕೊಳ್ಳಿ