ಮಿಲಿಟರಿ ವಿಮಾನ ಪತನ ; ಆಫ್ರಿಕಾದ ಮಲಾವಿಯ ಉಪಾಧ್ಯಕ್ಷ ಸೇರಿ 9 ಜನ ದುರ್ಮರಣ

In ವಿದೇಶ
June 11, 2024

ಲಿಲೋಂಗ್ವೆ: ವಿಮಾನ ಪತನಗೊಂಡ ಪರಿಣಾಮ ಪೂರ್ವ ಆಫ್ರಿಕಾದ ಮಲಾವಿಯ (Malawi) ಉಪಾಧ್ಯಕ್ಷ ಸೌಲೋಸ್ ಚಿಲಿಮಾ (Saulos Chilim) ಸೇರಿದಂತೆ 9 ಜನ ದುರ್ಮರಣ ಹೊಂದಿರುವ ಘಟನೆ ನಡೆದಿದೆ.

ವಿಮಾನದಲ್ಲಿ ಪೂರ್ವ ಆಫ್ರಿಕಾದ ಮಲಾವಿಯ ಉಪಾಧ್ಯಕ್ಷ ಸೇರಿದಂತೆ 9 ಜನ ತೆರಳುತ್ತಿದ್ದರು. ಇದು ಮಿಲಿಟರಿ ವಿಮಾನವಾಗಿತ್ತು. ಆದರೆ, ವಿಮಾನ ಪತನವಾಗುತ್ತಿದ್ದಂತೆ ಎಲ್ಲ 9 ಜನರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ದೇಶದ ಉತ್ತರದಲ್ಲಿರುವ ಪರ್ವತ ಪ್ರದೇಶದಲ್ಲಿ ವಿಮಾನ ಪತನಗೊಂಡಿದೆ. ವಿಮಾನ ಪತನವಾಗುತ್ತಿದ್ದಂತೆ 24 ಗಂಟೆಗೂ ಅಧಿಕ ಕಾಲ ಹುಟುಕಾಟ ನಡೆಸಲಾಗಿತ್ತು. ಈಗ ವಿಮಾನದ ಅವಶೇಷಗಳು ಪತ್ತೆಯಾಗಿವೆ. ಈ ಬಗ್ಗೆ ಮಲಾವಿಯನ್ ಅಧ್ಯಕ್ಷ ಲಾಜರಸ್ ಚಕ್ವೆರಾ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.

ಈ ಸುದ್ದಿ ಹಂಚಿಕೊಳ್ಳಿ