29 views 0 secs 0 comments

ಇಟಲಿ ಪ್ರಧಾನಿ ಬೇಟಿ ಮಾಡಿದ ನರೇಂದ್ರ ಮೋದಿ

In ದೇಶ, ವಿದೇಶ
November 19, 2024

ಬ್ರೆಜಿಲ್ನಲ್ಲಿ ನಡೆದ ಜಿ-20 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಟಲಿಯ ಪ್ರಧಾನಿ ಮೆಲೋನಿಯವರನ್ನು ಭೇಟಿ ಮಾಡಿದರು.

ಅಲ್ಲದೇ, ಪ್ರಧಾನಿ ಮೋದಿ ಅವರು, ಬ್ರೆಜಿಲ್, ಸಿಂಗಾಪುರ, ಬ್ರಿಟನ್, ಇಟಲಿ, ಫ್ರಾನ್ಸ್, ಇಂಡೋನೇಷ್ಯಾ ಸೇರಿದಂತೆ ಹಲವು ಜಾಗತಿಕ ನಾಯಕರ ಜತೆ ಮಾತುಕತೆ ನಡೆಸಿದರು. ಎರಡು ದಿನಗಳ ಶೃಂಗಸಭೆಯಲ್ಲಿ ಯುಎಸ್ ಅಧ್ಯಕ್ಷ ಜೋ ಬೈಡನ್, ಪಿಎಂ ಮೋದಿ, ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಮತ್ತು ಬ್ರಿಟಿಷ್ ಪ್ರಧಾನಿ ಕೀರ್ ಸ್ಟಾರ್ಮರ್ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು.

ಇದೇ ವೇಳೆ ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಉಭಯ ದೇಶಗಳ ನಡುವಿನ ರಕ್ಷಣೆ, ಭದ್ರತೆ ಸೇರಿದಂತೆ ಸಂಬಂಧಗಳ ಬಲವರ್ಧನೆ ಕುರಿತು ಚರ್ಚೆ ನಡೆಸಿದರು.

ಈ ಸುದ್ದಿ ಹಂಚಿಕೊಳ್ಳಿ