44 views 2 secs 0 comments

ಭವಾನಿ ರೇವಣ್ಣಗೆ ಮತ್ತೊಂದು ನೋಟಿಸ್ ನೀಡಿದ ಎಸ್ ಐಟಿ!

In ಹಾಸನ
May 31, 2024

ಹಾಸನ: ಸಂತ್ರಸ್ತ ಮಹಿಳೆ ಅಪಹರಣ ಪ್ರಕರಣದಲ್ಲಿ ಭವಾನಿ ರೇವಣ್ಣ (Bhavani Revanna) ಗೆ ಎಸ್ ಐಟಿ ಮತ್ತೊಂದು ನೋಟಿಸ್ ಜಾರಿ ಮಾಡಿದೆ.

15-05-24 ರಂದು ನೀಡಿದ್ದ ನೋಟಿಸ್ ಗೆ ಹೊಳೆನರಸೀಪುರದ ಚೆನ್ನಾಂಬಿಕಾ ನಿವಾಸದಲ್ಲಿ ಸ್ಪಷ್ಟನೆ ನೀಡುವುದಾಗಿ ಹೇಳಿದ್ದೀರಿ. ಆದರೆ, ಉತ್ತರಿಸಿಲ್ಲ. ಈ ಪ್ರಕರಣದಲ್ಲಿ ನೀವು ವಿಚಾರಣೆಗೆ ಒಳಪಡುವ ಅವಶ್ಯಕತೆ ಇದೆ. ಆದ್ದರಿಂದ ಜೂ.1 ರಂದು ಖುದ್ದು ಹಾಜರಾಗಬೇಕು ಎಂದು ನೋಟಿಸ್ ನೀಡಿದ್ದಾರೆ.

ಮಹಿಳಾ ಅಧಿಕಾರಿಗಳೊಂದಿಗೆ ಜೂನ್ 1 ರಂದು ಬೆಳಿಗ್ಗೆ 10 ರಿಂದ 5ರೊಳಗೆ ವಿಚಾರಣೆಗೆ ಹಾಜರಾಗುತ್ತೇವೆ. ಆ ಸಂದರ್ಭದಲ್ಲಿ ಖುದ್ದು ಮನೆಯಲ್ಲಿ ಹಾಜರಿರಬೇಕು ಎಂದು ನೋಟಿಸ್ ನೀಡಿದ್ದಾರೆ. ಆದರೆ, ಭವಾನಿ ರೇವಣ್ಣ ಅವರು 15 ದಿನಗಳಿಂದ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ. ಮೇ 4 ರಂದು ಸಂತ್ರಸ್ತೆಯರ ಸ್ಥಳ ಮಹಜರ್ ವೇಳೆ ಹೊಳೆನರಸೀಪುರ ಮನೆಯಲ್ಲಿ ಭವಾನಿ ರೇವಣ್ಣ ಹಾಜರಿದ್ದರು. ಮೇ 6 ರಂದು ಅವರನ್ನು ಜಿಲ್ಲೆಯ ಜೆಡಿಎಸ್ ಶಾಸಕರು ಹಾಗೂ ಮಾಜಿ ಶಾಸಕರು ಭೇಟಿಯಾಗಿದ್ದರು. ಆನಂತರ ಅವರು ಯಾವರ ಸಂಪರ್ಕಕ್ಕೂ ಬಂದಿಲ್ಲ.

ಜೈಲಿನಲ್ಲಿದ್ದ ಪತಿಯನ್ನೂ ಭೇಟಿ ಮಾಡಿಲ್ಲ. ಇತ್ತ ರೇವಣ್ಣ ಕೂಡ ಜೈಲಿನಿಂದ ಬಿಡುಗಡೆಯಾದರೂ ಭವಾನಿ ಅವರನ್ನು ಭೇಟಿಯಾಗಿಲ್ಲ. ಭವಾನಿ ರೇವಣ್ಣ ಎಲ್ಲಿದ್ದಾರೆಂಬ ಬಗ್ಗೆ ಎಸ್‌ಐಟಿ ಮಾಹಿತಿ ಕಲೆ ಹಾಕುತ್ತಿದೆ.

ಈ ಸುದ್ದಿ ಹಂಚಿಕೊಳ್ಳಿ