ಒಪ್ಪಂದದ ಮೇಲೆ ಪಡೆಯುವ ಬಸ್ ಗಳ ದರ ಏರಿಸಿದ ಇಲಾಖೆ!

In ರಾಜ್ಯ
January 08, 2025
ಒಪ್ಪಂದದ ಮೇಲೆ ಪಡೆಯುವ ಬಸ್ ಗಳ ದರ ಏರಿಸಿದ ಇಲಾಖೆ!

ಇತ್ತೀಚೆಗಷ್ಟೇ ಸರ್ಕಾರವು ಬಸ್ ಟಿಕೆಟ್ ದರ ಏರಿಕೆ ಮಾಡಿದೆ. ಈಗ ಒಪ್ಪಂದದ ಮೇಲೆ ಪಡೆಯುವ ಬಸ್ ಗಳ ದರ ಕೂಡ ಏರಿಕೆ ಮಾಡಿ ಆದೇಶ ಹೊರಡಿಸಲಾಗಿದೆ.

ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ಪ್ರಯಾಣ ದರ ಏರಿಕೆಯಾದ ಬೆನ್ನಲ್ಲೇ ಸಾಂಧರ್ಭಿಕ ಒಪ್ಪಂದದ ಮೇಲೆ ಒದಗಿಸುವ ಬಸ್‌ ಗಳ ಬಾಡಿಗೆ ಪರಿಷ್ಕರಣೆ ಮಾಡಲಾಗಿದೆ. ಸಾಂಧರ್ಭಿಕ ಒಪ್ಪಂದದ ಮೇಲೆ ಒದಗಿಸಲಾಗುವ ಬಸ್‌ ಗಳ ಬಾಡಿಗೆ ದರವನ್ನು ಕೂಡ ಶೇ. 15ರಷ್ಟು ಹೆಚ್ಚಳ ಮಾಡಿ ಸಾರಿಗೆ ಸಂಸ್ಥೆ ಆದೇಶ ಹೊರಡಿಸಿದೆ. ಹೀಗಾಗಿ ಇನ್ನು ಮುಂದೆ ಪ್ರತಿ ಕಿ.ಮೀ ದರದ ಮೇಲೆ ಶೇ. 15ರಷ್ಟು ಬಾಡಿಗೆ ದರ ಹೆಚ್ಚಳವಾಗಲಿದೆ.

ಸಾಮಾನ್ಯ ಸಾರಿಗೆ, ಅಶ್ವಮೇಧ, ಮಿಡಿ ಬಸ್‌, ಪಲ್ಲಕ್ಕಿ ಸೇರಿದಂತೆ 16 ಬಗೆಯ ಬಸ್‌ ಗಳ ಬಾಡಿಗೆ ದರ ಏರಿಕೆ ಮಾಡಲಾಗಿದೆ. ಅಲ್ಲದೇ, ಐರಾವತ, ಅಂಬಾರಿ ಸೇರಿದಂತೆ ಮತ್ತಿತರ ಎಸಿ ಬಸ್‌ ಗಳಿಗೆ ಜಿಎಸ್‌ ಟಿ ಸೇರಿದಂತೆ ದರ ಪರಿಷ್ಕರಿಸಿ ಆದೇಶ ಹೊರಡಿಸಲಾಗಿದೆ. ಈ ನೂತನ ದರವು ಜ. 8ರಿಂದ ಅನ್ವಯವಾಗಲಿದೆ. ಈಗಾಗಲೇ ಬುಕ್ಕಿಂಗ್‌ ಮಾಡಲಾಗಿರುವ ಒಪ್ಪಂದದ ವಾಹನಗಳಿಗೆ ಹಳೆಯ ದರವನ್ನೇ ವಿಧಿಸುವಂತೆ ಕೆಎಸ್ ಆರ್ ಟಿಸಿ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

ಈ ಸುದ್ದಿ ಹಂಚಿಕೊಳ್ಳಿ