ಅಪ್ರಾಪ್ತೆಯೊಂದಿಗೆ ವಿವಾಹವಾದ 63ರ ವೃದ್ಧ!

In ವಿದೇಶ
April 06, 2024

63 ವರ್ಷದ ವ್ಯಕ್ತಿಯೊಬ್ಬ 12 ವರ್ಷದ ಅಪ್ರಾಪ್ತೆಯನ್ನು ಮದುವೆಯಾಗಿರುವ ಘಟನೆ ನಡೆದಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಪಶ್ಚಿಮ ಆಫ್ರಿಕಾದ ಘಾನಾದಲ್ಲಿ ಈ ಘಟನೆ ನಡೆದಿದೆ. ಕಾನೂನು ಬದ್ಧವಾಗಿ ಹುಡುಗಿಗೆ 18 ವರ್ಷ ವಯಸ್ಸಾಗಿರಬೇಕು ಆದರೆ ಆ ಬಾಲಕಿಗೆ ಕೇವಲ 12 ವರ್ಷ ವಯಸ್ಸು. ವೃದ್ಧನು ಬಾಲಕಿ 6 ವರ್ಷದವಳಿದ್ದಾಗಿನಿಂದಲೂ ಅವಳನ್ನೇ ಮದುವೆಯಾಗಬೇಕೆಂದು ಮನಸ್ಸು ಮಾಡಿದ್ದ ಎನ್ನಲಾಗಿದೆ.

ನುಂಗ್ವಾ ಸಮುದಾಯದ ಧಾರ್ಮಿಕ ಮುಖಂಡ ನುಮೊ ಬೊರ್ಕೆಟೆ ಲಾವೆಹ್ ತ್ಸುರು, ತಮ್ಮದೇ ಸಮುದಾಯದ 12 ವರ್ಷದ ಹುಡುಗಿಯನ್ನು ವಿವಾಹವಾಗಿದ್ದಾರೆ. ಘಾನಾದಲ್ಲಿ ಬಾಲ್ಯ ವಿವಾಹವನ್ನು ಅಪರಾಧ. ಆದರೂ ಅಲ್ಲಿ ಇಂತಹ ವಿವಾಹಗಳು ನಡೆಯುತ್ತಲೇ ಇವೆ. ಘಾನಾದಲ್ಲಿ ಸುಮಾರು ಶೇ. 19ರಷ್ಟು ಹುಡುಗಿಯರು 18 ವರ್ಷ ತಲುಪುವುದಕ್ಕಿಂತಲೂ ಮೊದಲೇ ವಿವಾಹವಾಗಿದ್ದಾರೆ. ಶೇ. 5ರಷ್ಟು ಹುಡುಗಿಯರು 15ರೊಳಗೆ ಮದುವೆಯಾಗಿದ್ದಾರೆ ಎಂದು ವರದಿ ಹೇಳಿದೆ.

ಈ ಸುದ್ದಿ ಹಂಚಿಕೊಳ್ಳಿ