ನೆಲಕ್ಕೆ ಅಪ್ಪಳಿಸಿದ 120 ಅಡಿ ಎತ್ತರ ತೇರು!

ಬೆಂಗಳೂರು: 120 ಅಡಿ ಉದ್ದದ ತೇರು ನೆಲಕ್ಕೆ ಉರುಳಿರುವ ಘಟನೆಯೊಂದು ವರದಿಯಾಗಿದೆ.

ಆನೇಕಲ್ ತಾಲೂಕಿನ ಹೀಲಲಿಗೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇತಿಹಾಸ ಪ್ರಸಿದ್ಧ ಹುಸ್ಕೂರು ಮದ್ದೂರಮ್ಮ ಜಾತ್ರೆಯಲ್ಲಿ ಈ ಘಟನೆ ನಡೆದಿದೆ. ಹತ್ತಾರು ಗ್ರಾಮಗಳಿಂದ ಮದ್ದೂರಮ್ಮ ಜಾತ್ರೆಗೆ ಎತ್ತುಗಳು, ಟ್ರ್ಯಾಕ್ಟರ್​ಗಳ ಮೂಲಕ ತೇರು ಎಳೆಯಲಾಗುತ್ತಿತ್ತು. ಹೀಲಲಿಗೆ ಗ್ರಾಮದಿಂದ ಹುಸ್ಕೂರಿಗೆ ತೇರು ಚಲಿಸುತ್ತಿದ್ದ ಸಂದರ್ಭದಲ್ಲಿ ಕಮ್ಮಸಂದ್ರದ ಹೈಪರ್ ಮಾರ್ಕೆಟ್ ತಿರುವಿನಲ್ಲಿ ಎಡಭಾಗಕ್ಕೆ ವಾಲಿಕೊಂಡು ನೆಲಕ್ಕೆ ಅಪ್ಪಳಿಸಿದೆ. ಆದರೆ, ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಸಾವು- ನೋವು ಸಂಭವಿಸಿಲ್ಲ.

ಈ ಸುದ್ದಿ ಹಂಚಿಕೊಳ್ಳಿ