62 views 0 secs 0 comments

ಬಂಗಾಳದಲ್ಲಿ ಎನ್ ಐಎ ಅಧಿಕಾರಿಗಳ ಮೇಲೆ ದಾಳಿ! ಫೀಲ್ಡ್ ಗೆ ಇಳಿದ ಸೇನೆ!

In ದೇಶ
April 06, 2024

ಕೊಲ್ಕತ್ತಾ: ತೃಣಮೂಲ ಕಾಂಗ್ರೆಸ್ ಮುಖಂಡರೊಬ್ಬರ ಮನೆಯಲ್ಲಿ ಎರಡು ವರ್ಷಗಳ ಹಿಂದೆ ನಡೆದಿದ್ದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಬಂಧನಕ್ಕೆ ತೆರಳಿದ್ದ ಎನ್‍ಐಎ ಅಧಿಕಾರಿಗಳ ಕಾರಿನ ಮೇಲೆ ಇಟ್ಟಿಗೆ, ಕಲ್ಲುಗಳನ್ನು ಎಸೆದು ಹಲ್ಲೆಗೆ ಯತ್ನಿಸಿರುವ ಘಟನೆ ನಡೆದಿದೆ.

ಈ ಘಟನೆ ಪೂರ್ವ ಮಿಡ್ನಾಪುರದ ಭೂಪತಿನಗರದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿ ಕೋಲ್ಕತ್ತಾಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಘಟನೆಯಲ್ಲಿ ಕಾರಿನ ಗ್ಲಾಸ್‍ಗೆ ಹಾನಿಯಾಗಿದೆ. ಈ ವೇಳೆ ಉದ್ರಿಕ್ತ ಗುಂಪನ್ನು ನಿಯಂತ್ರಸಲು ಸಿಆರ್ ಪಿಎಫ್ ಸಿಬ್ಬಂದಿ ಲಾಠಿಚಾರ್ಜ್ ನಡೆಸಿದ್ದಾರೆ ಎನ್ನಲಾಗಿದೆ.

ಡಿಸೆಂಬರ್ 3, 2022ರಂದು, ಭೂಪತಿನಗರದ ಮನೆಯೊಂದರಲ್ಲಿ ಸ್ಫೋಟ ಸಂಭವಿಸಿ ಮೂವರು ಸಾವನ್ನಪ್ಪಿದ್ದರು. ಕಳೆದ ತಿಂಗಳು ಸ್ಫೋಟಕ್ಕೆ ಸಂಬಂಧಿಸಿದಂತೆ ಎನ್‍ಐಎ, ತೃಣಮೂಲ ಕಾಂಗ್ರೆಸ್‍ನ 8 ನಾಯಕರ ವಿಚಾರಣೆ ನಡೆಸಿತ್ತು.

ಈ ಸುದ್ದಿ ಹಂಚಿಕೊಳ್ಳಿ