100 views 0 secs 0 comments

10 ವರ್ಷಗಳಲ್ಲಿ ದೇಶದ ಚಿತ್ರಣವನ್ನೇ ಮೋದಿ ಬದಲಾಯಿಸಿದ್ದಾರೆ; ಯೋಗಿ ಆದಿತ್ಯನಾಥ್!

In ದೇಶ, ರಾಜಕೀಯ
April 24, 2024

ಲಕ್ನೋ: ದೇಶದ ಚಿತ್ರಣವನ್ನೇ ಪ್ರಧಾನಿ ನರೇಂದ್ರ ಮೋದಿ 10 ವರ್ಷಗಳಲ್ಲಿ ಬದಲಾಯಿಸಿದ್ದಾರೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಲಕ್ನೋದಲ್ಲಿ ರಾಜ್ಯ ಪ್ರಧಾನ ಕಚೇರಿಯಲ್ಲಿ ಮಾಧ್ಯಮ ಕೇಂದ್ರದ ಉದ್ಘಾಟನೆ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶದ ಅಭಿವೃದ್ಧಿಗಾಗಿ ಮೋದಿ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು. ದೇಶದ ಅಭಿವೃದ್ಧಿಗಾಗಿ ಮೋದಿ ಅವರೇ ಪ್ರಧಾನಿಯಾಗಬೇಕೆಂಬ ಆಸೆ ಜನಸಾಮಾನ್ಯರಲ್ಲಿದೆ ಎಂದು ಹೇಳಿದ್ದಾರೆ.

ಕಳೆದ ದಶಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಭಿವೃದ್ಧಿಗಾಗಿ ಪರಿವರ್ತನಾಶೀಲ ಪ್ರಯತ್ನಗಳನ್ನು ಮಾಡಿದ್ದಾರೆ. ಹೀಗಾಗಿಯೇ ಜನರಲ್ಲಿ ಮತ್ತೊಮ್ಮೆ ಮೋದಿ ಸರ್ಕಾರ ಬೇಕು ಎಂಬ ಭಾವನೆ ಇದೆ. ಮುಂದೆ ಇಡೀ ವಿಶ್ವದಲ್ಲಿಯೇ ಭಾರತ ಮುಂಚೂಣಿಯಲ್ಲಿ ನಿಲ್ಲಬೇಕಾದರೆ, ಅದಕ್ಕೆ ಮೋದಿ ಮಾತ್ರ ಬೇಕು. ಬೇರೆಯವರಿಂದ ಅದು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.

ಈ ಸುದ್ದಿ ಹಂಚಿಕೊಳ್ಳಿ