61 views 0 secs 0 comments

7 ದಿನ ಇಡಿ ಕಸ್ಟಡಿಯಲ್ಲಿ ಅರವಿಂದ್ ಕೇಜ್ರಿವಾಲ್!

In ದೇಶ, ರಾಜಕೀಯ
March 22, 2024

ನವದೆಹಲಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು 7 ದಿನಗಳ ಕಾಲ ಇಡಿ( ಜಾರಿ ನಿರ್ದೇಶನಾಲಯ) ವಶಕ್ಕೆ ನೀಡಲಾಗಿದೆ.

ಬಂಧನ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯನ್ನು ಅರವಿಂದ್‌ ಕೇಜ್ರಿವಾಲ್‌ ಹಿಂಪಡೆದಿದ್ದರು. ಇದಾದ ನಂತರ ದೆಹಲಿಯ ರೂಸ್ ಅವೆನ್ಯೂ ಕೋರ್ಟ್, ಇಡಿ ವಶಕ್ಕೆ ವಹಿಸಿ ಆದೇಶಿಸಿದೆ. ಕೇಜ್ರಿವಾಲ್ ರನ್ನು 10 ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಕೇಂದ್ರೀಯ ಸಂಸ್ಥೆ ಕೋರಿತ್ತು. ತನ್ನ ತನಿಖೆಯನ್ನು ಪೂರ್ಣಗೊಳಿಸಲು ಹಾಗೂ ಆಮ್ ಆದ್ಮಿ ಪಕ್ಷದ ನಾಯಕನನ್ನು ಪ್ರಕರಣದಲ್ಲಿ ಬಂಧಿತ ಆರೋಪಿಗಳೊಂದಿಗೆ ವಿಚಾರಣೆಗೆ ಸಮಯ ಬೇಕಾಗುತ್ತದೆ ಎಂದು ಮನವಿ ಮಾಡಲಾಗಿದೆ.

ಈ ಪ್ರಕರಣದಲ್ಲಿ ಇಡಿ, ಅರವಿಂದ್ ಕೇಜ್ರಿವಾಲ್ ರನ್ನು ಕಿಂಗ್ ಪಿನ್ ಎಂದು ಕರೆದಿದೆ. ಆಪಾದಿತ ಹಗರಣದ ಒಟ್ಟು ಆದಾಯ 600 ಕೋಟಿ ರೂ.ಗೂ ಮೀರಿದೆ ಎಂದು ಇಡಿ ಹೇಳಿದೆ.

ಈ ಸುದ್ದಿ ಹಂಚಿಕೊಳ್ಳಿ